ಮೈಸೂರು

ಬೀಗ ತೆರೆಯಿರಿ : ಕಾರ್ಮಿಕರ ಶಾಂತಿಯುತ ಪ್ರತಿಭಟನೆ

ಮೈಸೂರು ನಗರದ ಹೆಬ್ಬಾಳು ಬಡಾವಣೆಯಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಫೈನ್ ಕೋರ್ ಕೇಬಲ್ಸ್ ಪ್ರೈವೇಟ್ ಲಿಮಿಟೆಡ್  ಕಾರ್ಖಾನೆಯು ರಾತ್ರಿಯ ವೇಳೆ ಒಳಗಿದ್ದ ಬಹುಬೆಲೆ ಬಾಳುವ ಕೇಬಲ್ ಗಳನ್ನು, ಇತರೆ ಕಚ್ಚಾ ಸಾಮಗ್ರಿಗಳನ್ನು ಹೊರಕ್ಕೆ ಸಾಗಿಸಿ ಕಂಪನಿಗೆ ಕಾನೂನು ಬಾಹಿರ ಬೀಗಮುದ್ರೆಯನ್ನು ಹಾಕಲಾಗಿತ್ತು. ಆದರೆ ಮಾತುಕತೆ ನಡೆಸಲಾಗಿ ಬೀಗವನ್ನು ತೆರೆಯುವುದಾಗಿ ತಿಳಿಸಲಾಗಿತ್ತು. ಇದುವರೆಗೂ ಬೀಗ ತೆರೆಯದ ಕಾರಣ ಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿದೆ. ಬೀಗವನ್ನು ತೆರವುಗೊಳಿಸಿ ಎಂದು ಒತ್ತಾಯಿಸಿ ಕಾರ್ಮಿಕರು ಮಂಗಳವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.

ಆಡಳಿತ ವರ್ಗಕ್ಕೆ ಸಂಬಂಧಪಟ್ಟ ನಿರ್ದೇಶಕರು ಹಾಗೂ ಷೇರುದಾರರ ವೈಯುಕ್ತಿಕ ಕಿತ್ತಾಟಗಳಿಂದ ಲಾಭದಾಯಕವಾಗಿ ನಡೆಯುತ್ತಿದ್ದ ಫೈನ್ ಕೋರ್ ಕೇಬಲ್ಸ್ ಕಾರ್ಖಾನೆಯು ಇನ್ನೂ ಆರಂಭವಾಗದೇ ಕಾರ್ಮಿಕರು ಮತ್ತವರ ಕುಟುಂಬಿಕರು ಆತಂಕ್ಕೀಡಾಗಿದ್ದಾರೆ. ಸಮಸ್ಯೆಯ ಪರಿಹಾರಕ್ಕಾಗಿ ಸೂಕ್ತರೀತಿಯ ಪ್ರಯತ್ನವನ್ನು ಮಾಡಿ ಕಂಪನಿಯ ಕಾನೂನು ಬಾಹಿರ ಬೀಗಮುದ್ರೆಯನ್ನು ತೆರವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಫೈನ್ ಕೋರ್ ಕೇಬಲ್ಸ್ ಒಕ್ಕೂಟದ ಕಾರ್ಯದರ್ಶಿ ರಾಜು, ಅಧ್ಯಕ್ಷ ಹೆಚ್.ಆರ್.ಶೇಷಾದ್ರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

comments

Related Articles

error: