
ಮೈಸೂರು
ಡಿ.18ಕ್ಕೆ ಬೈಲುಕುಪ್ಪೆಗೆ ದಲೈಲಾಮ ಆಗಮನ; ಸ್ಥಳೀಯ ಟಿಬೆಟಿಯನ್ನರಿಗೆ ಗುರುತಿನ ಚೀಟಿ: ರುದ್ರಮುನಿ
ಮೈಸೂರು,(ಬೈಲಕುಪ್ಪೆ),ಡಿ.13-ಬೌದ್ಧ ಧರ್ಮದ ಧರ್ಮಗುರು ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ದಲೈಲಾಮರವರು ಡಿ.18ರಂದು ಬೈಲಕುಪ್ಪೆಗೆ ಆಗಮಿಸುತ್ತಿರುವುದರಿಂದ ಸ್ಥಳೀಯ ಟಿಬೆಟಿಯನ್ನರು ತಮ್ಮ ಗುರುತಿನ ಚೀಟಿಯನ್ನು ಪಡೆದುಕೊಂಡು ಪೊಲೀಸರೊಡನೆ ಸಹಕರಿಸಿ ಸಲಹೆಗಳನ್ನು ಪಡೆದುಕೊಳ್ಳಬೇಕೆಂದು ಅಡಿಷನಲ್ ಎಸ್ಪಿ ರುದ್ರಮುನಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಟಿಬೆಟನ್ ನಿರಾಶ್ರಿತರ ಲುಗ್ಸಮ್ ಸಮುದಾಯ ಭವನದಲ್ಲಿ ತಹಸಿಲ್ದಾರ್ ಜೆ.ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಟಿಬೆಟನ್ ಬಂಧುಗಳು, ತಾಲೂಕಿನ ವಿವಿಧ ಅಧಿಕಾರಿಗಳ ಪೂರ್ವಸಭೆಯಲ್ಲಿ ಮಾತನಾಡಿದರು.
ಧರ್ಮಗುರು ದಲೈಲಾಮರವರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತಿರುವುದರಿಂದ ಪ್ರತಿಯೊಬ್ಬರು ಸಹಕರಿಸಬೇಕು. ಇಲ್ಲದಿದ್ದರೆ ಕಾನೂನು ಅಡಿಯಲ್ಲಿ ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಭಾಸ್ಕರ್, ಸರ್ಕಲ್ ಇನ್ಸ್ಪೆಕ್ಟರ್ ಸಿದ್ದಯ್ಯ, ಇಓ ಬಸವರಾಜು, ಪಿಡಿಓ ಶಿವಯೋಗ, ಪಿಎಸ್ಐ ಲೊಕೇಶ್, ಲಾಮಕ್ಯಾಂಪಿನ ಮುಖ್ಯ ಗುರೂಜಿ ಚಂಬ, ಸೆಟಲ್ಮೆಂಟ್ ಅಧಿಕಾರಿ, ಗೆಲಾಕ್ ಇತರರು ಇದ್ದರು. (ವರದಿ-ಆರ್.ಬಿ.ಆರ್, ಎಂ.ಎನ್)