
ಮೈಸೂರು
ಬೆಳದಿಂಗಳ ಕಾರ್ಯಕ್ರಮ
ಮೈಸೂರಿನ ಸುತ್ತೂರು ಮಠದದಲ್ಲಿ ಹುಣ್ಣಿಮೆಯ ಪ್ರಯುಕ್ತ 181ನೇ ಬೆಳದಿಂಗಳ ಸಂಗೀತ ಕಾರ್ಯಕ್ರಮ ನಡೆಯಿತು.
ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಬೆಳದಿಂಗಳ ಸಂಗೀತ ನಡೆಯಿತು. ವಿದ್ವಾನ್ ಅಶ್ವತ್ಥನಾರಾಯಣ ಅವರ ಗಾಯನಕ್ಕೆ, ವಯೋಲಿನ್ ನಲ್ಲಿ ಚಾರುಲತಾ ರಾಮಾನುಜಂ, ಮೃದಂಗದಲ್ಲಿ ಅನೂರು ಅನಂತಕೃಷ್ಣ ಶರ್ಮಾ ಸಾಥ್ ನೀಡಿದರು.
ನೂರಾರು ಸಂಗೀತಪ್ರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಗೀತೆ ಸುಧೆಯನ್ನು ಸವಿದರು.