ಮೈಸೂರು

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಹೆಚ್.ಡಿ.ದೇವೇಗೌಡ

ಮೈಸೂರು,(ನಂಜನಗೂಡು),ಡಿ.14- ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾದ ನಂಜನಗೂಡು ತಾಲೂಕಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಗುರುವಾರ ಭೇಟಿ ನೀಡಿ ಶ್ರೀಕಂಠೇಶ್ವರ ಹಾಗೂ ಪಾರ್ವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂಜುಂಡೇಶ್ವರನಿಗೆ ರುದ್ರಾಭಿಷೇಕ ನೆರವೇರಿಸಿದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವರ ಸನ್ನಿಧಿಯಲ್ಲಿ ಕುಳಿತು ಸುಮಾರು 5 ನಿಮಿಷ ದೇವೇಗೌಡರು ಧ್ಯಾನ ಮಾಡಿದರು.

ಮೈಸೂರಿನಲ್ಲಿ ಜೆಡಿಎಸ್ ಸಂಘಟನಾ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ನಂಜನಗೂಡಿನಾದ್ಯಂತ ಜೆಡಿಎಸ್ ರಣಕಹಳೆ ಪ್ರಾರಂಭವಾಗಿದೆ. ಚುನಾವಣೆಗಾಗಿ ದೇವೇಗೌಡರು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದು, ಕಾರ್ಯಕರ್ತರಲ್ಲಿ ತೀವ್ರ ಕುತೂಹಲ ಮೂಡಿದೆ. ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ ಉತ್ತರ ಸಿಗುವ ಕಾತರದಲ್ಲಿ ಕಾರ್ಯಕರ್ತರು. ದೇವೇಗೌಡರು ಸೇರಿದಂತೆ ಕುಮಾರಸ್ವಾಮಿ ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ. (ವರದಿ-ಕೆ.ಎಸ್, ಎಸ್.ಎನ್, ಎಂ.ಎನ್)

Leave a Reply

comments

Related Articles

error: