ಮೈಸೂರು

ಸಿ.ಮಹದೇಶ್ ಸದಸ್ಯತ್ವ ರದ್ದು

ಕೊಲೆ ಅಪರಾಧವೊಂದರಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಿ.ಮಹದೇಶ್ ಎಂಬವರ ಸದಸ್ಯತ್ವವವನ್ನು ಮೈಸೂರು ಮಹಾನಗರಪಾಲಿಕೆ ರದ್ದುಗೊಳಿಸಿದೆ.

ಮೈಸೂರು ಮಹಾನಗರ ಮಾಲಿಕೆ ವ್ಯಾಪ್ತಿಗೆ ಸೇರಿದ ವಾರ್ಡ್ ನಂಬರ್ 32ರಲ್ಲಿ ಮಹದೇಶ್ ಸದಸ್ಯರಾಗಿದ್ದರು. 2008ರಲ್ಲಿ ನಡೆದ ಜೋಡಿ ಕೊಲೆಯೊಂದರಲ್ಲಿ ಪಾಲ್ಗೊಂಡಿದ್ದರು ಎಂಬುದು ವಿಚಾರಣೆಯ ವೇಳೆ ತಿಳಿದುಬಂದಿತ್ತು. ಇದರಿಂದ ಕಳೆದ ಕೆಲವು ತಿಂಗಳುಗಳ ಹಿಂದೆ ಇವರನ್ನು ಬಂಧಿಸಲಾಗಿತ್ತು. ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನೂ ವಿಧಿಸಿತ್ತು. ಇದೀಗ ಮಹದೇಶ್ ಅವರಿಗೆ ಪ್ರಾದೇಶಿಕ ಆಯುಕ್ತ ಎಂ.ವಿ.ಜಯಂತಿ ಅವರ ಆದೇಶದ ಮೇರೆಗೆ ಪಾಲಿಕೆ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.

Leave a Reply

comments

Related Articles

error: