ಮೈಸೂರು

ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಗಳಡಿ 606 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಣೆ

ಮೈಸೂರು,ಡಿ.14-ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಗಳಡಿ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಶಾಸಕ ವಾಸು ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಒಟ್ಟು 606 ಫಲಾನುಭವಿಗಳಿಗೆ ಒಟ್ಟು 107.95 ಲಕ್ಷ ರೂ. ಸಹಾಯಧನದ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ 213 ಫಲಾನುಭವಿಗಳಿಗೆ 62.50 ಲಕ್ಷ ರೂ. ಸಹಾಯಧನ, ಡಿ.ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ 195 ಫಲಾನುಭವಿಗಳಿಗೆ 19.50 ಲಕ್ಷ ರೂ. ಸಹಾಯಧನ, ಕರ್ನಾಟಕ ಅಲ್ಪಸಂಖ‍್ಯಾತರ ಅಭಿವೃದ್ಧಿ ನಿಗಮದಲ್ಲಿ 144 ಫಲಾನುಭವಿಗಳಿಗೆ 13.95 ಲಕ್ಷ ರೂ. ಸಹಾಯಧನ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ 54 ಫಲಾನುಭವಿಗಳಿಗೆ 12 ಲಕ್ಷ ರೂ. ಸಹಾಯಧನ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎಚ್.ಎ.ವೆಂಕಟೇಶ್, ಮಾಜಿ ಮಹಾಪೌರರಾದ ಬಿ.ಕೆ.ಪ್ರಕಾಶ್, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಮಾಜಿ ಉಪಮಹಾಪೌರರಾದ ಪುಷ್ಪಲತಾ ಜಗನ್ನಾಥ‍್, ಪುಷ್ಪವಲ್ಲಿ, ನಗರಪಾಲಿಕೆ ಸದಸ್ಯರಾದ ಶಿವಮಾದು, ರಮೇಶ್, ಪ್ರಶಾಂತ್, ಬಿ.ಭಾಗ್ಯವತಿ ಸುಬ್ರಹ್ಮಣ್ಯ, ಸುಹೇಲ್ ಬೇಗ್, ಚೌಹಳ್ಳಿ ಪುಟ್ಟಸ್ವಾಮಿ, ನಗರಪಾಲಿಕೆ ಮಾಜಿ ಸದಸ್ಯರುಗಳಾದ ಪ್ರಕಾಶ್, ಸುಶೀಲ ಮರೀಗೌಡ, ಮುಖಂಡರಾದ ಪ್ರದೀಪ್ ಕುಮಾರ್, ತುಕರಾಂ ಯಾದವ್, ಸುಂದರ್ ಕುಮಾರ್, ಸುನಂದ್ ಕುಮಾರ್, ರಾಜರಾಜೇಂದ್ರ, ಯೋಗನರಸಿಂಹೇಗೌಡ, ಕೆ.ವಿ.ಶ್ರೀಧರ್, ಕೆ.ರಮೇಶ್, ಆನಂದ್ ಕುಮಾರ್, ವಿಶ್ವ, ಮುಕ್ತಾರ್ ಅಹಮದ್, ಮಹದೇವ್, ನರಸಿಂಹಣ್ಣ ಇತರರು ಉಪಸ್ಥಿತರಿದ್ದರು. (ವರದಿ-ಕೆ.ಎಸ್, ಎಂ.ಎನ್)

Leave a Reply

comments

Related Articles

error: