
ದೇಶ
ಮೋದಿ ತಾಯಿಯಿಂದ ಬ್ಯಾಂಕ್ನಲ್ಲಿ ಹಣ ವಿನಿಮಯ
ಪ್ರಧಾನಿ ನರೇಂದ್ರ ಮೋದಿ ಅವರ 96 ವರ್ಷದ ತಾಯಿ ಹೀರಾಬೆನ್ ಮೋದಿ ಅವರು ಮಂಗಳವಾರ ಬೆಳಗ್ಗೆ ಅಹಮದಾಬಾದ್ನ ಬ್ಯಾಂಕ್ವೊಂದಕ್ಕೆ ತೆರಳಿ ತಮ್ಮಲ್ಲಿದ್ದ ಹಣ ವಿನಿಮಯ ಮಾಡಿಕೊಂಡರು.
ವ್ಹೀಲ್ಚೇರ್ನಲ್ಲಿ ಬ್ಯಾಂಕ್ಗೆ ಆಗಮಿಸಿದ ಹೀರಾಬೆನ್ ಅವರು ಬಳಿಕ ಇಬ್ಬರು ಮಹಿಳೆಯರ ಸಹಾಯದಿಂದ ಬ್ಯಾಂಕ್ ಒಳಗೆ ಬಂದರು. ಅವರು 4,500 ರು. ಹಣ ವಿನಿಮಯ ಮಾಡಿಕೊಂಡರು ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು ಹಿರಿಯ ನಾಗರಿಕರಿಗೆ ಮತ್ತು ದಿವ್ಯಾಂಗರಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ ಮಾಡಲಾಗಿದೆ ಎಂದು ಸೋಮಾವಾರದಂದು ಘೋಷಿಸಿದ್ದರು.