ಕರ್ನಾಟಕ

ವೋಟ್ ಬ್ಯಾಂಕ್ ಗಾಗಿ ಗ್ರಾಮೀಣ ಪ್ರದೇಶಕ್ಕೆ ಕಾಲಿಟ್ಟ 10 ರೂ. ಕ್ಯಾಂಟೀನ್

ಮಂಡ್ಯ,ಡಿ.14-ಕಾಂಗ್ರೆಸ್ ಮುಖಂಡ ಪಿ.ರವಿಕುಮಾರ್ ಹೆಸರಲ್ಲಿ ಮಂಡ್ಯದಲ್ಲಿ ಮತ್ತೊಂದು ೧೦ ರೂ. ಕ್ಯಾಂಟೀನ್ ಶುರುವಾಗಿದೆ. ಆ ಮೂಲಕ ಮಂಡ್ಯ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲಿ ಕ್ಯಾಂಟೀನ್ ರಾಜಕೀಯ ಶುರುವಾಗಿದೆ ಎನ್ನಬಹುದು.

ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಕ್ಯಾಂಟೀನ್ ಆರಂಭವಾಗಿದೆ. ಗ್ರಾಮೀಣ ಭಾಗದಲ್ಲಿ 10 ರೂ. ಗೆ ಆಹಾರ ನೀಡಿ ಗ್ರಾಮಸ್ಥರ ಮತ ಪಡೆಯಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ.

ಈ ಮೊದಲು ನಗರಕ್ಕೆ ಸೀಮಿತವಾಗಿದ್ದ 10 ರೂ. ನ ಕ್ಯಾಂಟೀನ್ ಈಗ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದೆ. ಮಂಡ್ಯದಲ್ಲಿ ಈಗಾಗಲೇ ಅಪ್ಪಾಜಿ, ಗಾಂಧಿ, ಅಣ್ಣಾ, ರಮ್ಯಾ ಹೆಸರಿನಲ್ಲಿ 10 ರೂ. ಕ್ಯಾಂಟೀನ್ ಗಳಿವೆ. ಈಗ ಬೆಸಗರಹಳ್ಳಿ ಗ್ರಾಮದಲ್ಲಿ ಪಿ.ರವಿಕುಮಾರ್ ಹೆಸರಲ್ಲಿ ಕ್ಯಾಂಟೀನ್ ಪ್ರಾರಂಭವಾಗಿದೆ. (ವರದಿ-ಕೆ.ಎಸ್, ಎಂ.ಎನ್)

Leave a Reply

comments

Related Articles

error: