ಮೈಸೂರು

ಜೈಪುರ ಸಾಹಿತ್ಯ ಉತ್ಸವದಲ್ಲಿ ಎಸ್‍.ಎಲ್‍. ಭೈರಪ್ಪ

ಖ್ಯಾತ ಕನ್ನಡ ಕಾದಂಬರಿಕಾರ ಎಸ್‍.ಎಲ್‍. ಭೈರಪ್ಪ ಅವರು ಮೊದಲ ಬಾರಿಗೆ ಜೈಪುರ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

2016ರಲ್ಲಿ ಭೈರಪ್ಪ ಅವರು ಭಾರತದ ನಾಲ್ಕನೇ ಅತ್ಯುನ್ನತ ಗೌರವವಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಜನವರಿ 19ರಿಂದ 23ರವರೆಗೆ ಜೈಪುರದ ಡಿಗ್ಗಿ ಅರಮನೆಯಲ್ಲಿ ನಡೆಯಲಿರುವ 10ನೇ ಜೈಪುರ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ವಿಶ್ವದ ಖ್ಯಾತ ಸಾಹಿತಿಗಳ ಹೆಸರನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಎಸ್‍.ಎಲ್‍ ಭೈರಪ್ಪ ಅವರ ಹೆಸರೂ ಸೇರಿದೆ. ಭೈರಪ್ಪ ಅವರೊಂದಿಗೆ ಖ್ಯಾತ ಬರಹಗಾರರಾದ ಅಲೈಸ್ ವಾಕರ್, ಚಿತ್ರಾ ಬ್ಯಾನರ್ಜಿ ದೇವಕರುಣಿ, ವಿಕ್ರಂ ಚಂದ್ರ, ಸ್ವಾನಂದ್ ಕಿರ್ಕಿರೆ, ತಹ್ಮೀಮಾ ಆನಮ್, ರೊಬಾರ್ಟೋ ಕಲಾಸೋ ಮತ್ತು ನರೇಂದ್ರ ಕೊಹ್ಲಿ ಅವರು ಕೂಡ ಭಾಗವಹಿಸಲಿದ್ದಾರೆ. ಈ ಸಮ್ಮೇಳನವು 250 ಮಂದಿ ಬರಹಗಾರರು, ಚಿಂತಕರು, ರಾಜಕಾರಣಿಗಳು, ಪರ್ತಕರ್ತರನ್ನು ಸ್ವಾಗತಿಸಲಿದೆ.

ಎಸ್‍.ಎಲ್‍.ಭೈರಪ್ಪ ಅವರ ಬಹಳಷ್ಟು ಕಾದಂಬರಿಗಳು ಇಂಗ್ಲಿಷ್ ಸೇರಿ ವಿವಿಧ ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಅತೀ ಹೆಚ್ಚು ಓದುಗರನ್ನು ಹೊಂದಿರುವ ಕನ್ನಡ ಲೇಖಕರಲ್ಲಿ ಒಬ್ಬರಾಗಿದ್ದಾರೆ. ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಪುರಸ್ಕೃತ ಬರಹಗಾರ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಮತ್ತು ಭಾರತೀಯ ಸಾಹಿತ್ಯವನ್ನು ಪ್ರತಿನಿಧಿಸಲಿದ್ದಾರೆ.

Leave a Reply

comments

Related Articles

error: