ಮೈಸೂರು

ಮರಣಿಸಿದ ವ್ಯಕ್ತಿಗೇ ಚಿಕಿತ್ಸೆ ನೀಡಿ ಬಿಲ್ ಹೆಚ್ಚಿಸುತ್ತಿರುವ ವೈದ್ಯರು : ಕುಟುಂಬಿಕರಿಂದ ಪ್ರತಿಭಟನೆ

death-web-2ಎರಡು ದಿನಗಳ ಹಿಂದೆಯೇ ಮರಣಿಸಿದರೂ ಮಂಗಳವಾರ ಬೆಳಿಗ್ಗೆ ಮರಣವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಸುಳ್ಳು ವರದಿ ನೀಡಿ ತಮ್ಮಿಂದ ಸಾಕಷ್ಟು ಹಣವನ್ನು ವಸೂಲು ಮಾಡಿದ್ದಾರೆ ಎಂದು ಆರೋಪಿಸಿ ಮೃತ ವ್ಯಕ್ತಿಯ ಮನೆಯವರು ಆಸ್ಪತ್ರೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಮೈಸೂರಿನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಮೈಸೂರು ತಾಲೂಕಿನ ಎರಗನಹಳ್ಳಿ ನಿವಾಸಿಯೋರ್ವರು ಕಳೆದ 10ನೇ ತಾರೀಖಿನಂದು ಮದುವೆಗೆಂದು ತೆರಳಿದವರು ಮರಳಿ ಬರುವಾಗ ಅಪಘಾತಕ್ಕೀಡಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ಹಿಂದೆಯೇ ಮರಣಿಸಿದರೂ ಸಹ ಆಸ್ಪತ್ರೆಯ ವೈದ್ಯರು ಮಂಗಳವಾರ ಬೆಳಿಗ್ಗೆ ಮರಣಿಸಿದ್ದಾರೆ ಎಂದು ಹೇಳಿ ತಮ್ಮಿಂದ ಸಾಕಷ್ಟು ಹಣವನ್ನು ಸುಲಿಗೆ ಮಾಡಿದ್ದಾರೆ. ಹಣವನ್ನು ಮರಳಿ ಕೊಡುವವರೆಗೂ ನಾವು ಶವವನ್ನು ಕೊಂಡೊಯ್ಯುವುದಿಲ್ಲವೆಂದು ಮನೆಯವರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು.

ಎರಗನಹಳ್ಳಿ ನಿವಾಸಿ ಸಿದ್ಧರಾಜು(29)ಎಂಬವರೇ ಮೃತಪಟ್ಟವರು. ಅವರು ಕಳೆದ 10ನೇ ತಾರೀಖಿನಂದು ಸಂಬಂಧಿಕರ ಮದುವೆ ತೆರಳಿದ್ದರು. ಮರಳಿ ಬರುವಾಗ ವಿದ್ಯಾವಿಕಾಸ ಕಾಲೇಜು ಬಳಿ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ನಗರದ ಕಾವೇರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಮನೆಯವರು ಎರಡು ದಿನಗಳ ಹಿಂದೆ ವೈದ್ಯರೋರ್ವರಿಂದ ಸಿದ್ಧರಾಜು ಮೃತಪಟ್ಟಿರುವುದನ್ನು ದೃಢಪಡಿಸಿಕೊಂಡಿದ್ದಾರೆ. ಆದರೂ ವೈದ್ಯರು ಮಂಗಳವಾರ ಬೆಳಿಗ್ಗೆ ಸತ್ತಿದ್ದಾನೆ ಎಂದು ಹೇಳಿ ತಮಗೆ ವಂಚಿಸುತ್ತಿದ್ದಾರೆ ಎಂದು ಮೃತನ ಮನೆಯವರು ಹಾಗೂ ಸಂಬಂಧಿಕರು ಆರೋಪಿಸಿದರು. ಆಸ್ಪತ್ರೆಯಲ್ಲಿ  ಬಿಲ್ ಹೆಚ್ಚಿಸಲಾಗಿದೆ. ನಮಗೆ ಹಣವನ್ನು ವಾಪಸ್ ನೀಡಿ, ನೀವು ಹಣ ವಾಪಸ್ ಕೊಡುವವರೆಗೂ ಶವವನ್ನು ಮನೆಗೊಯ್ಯುವುದಿಲ್ಲ  ಎಂದರು.

ಸ್ಥಳಕ್ಕೆ ನಜರಾಬಾದ್ ಸರ್ಕಲ್ ಇನ್ಸ್ ಪೆಕ್ಟರ್ ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾತಾವರಣವನ್ನು ತಿಳಿಗೊಳಿಸಿದ್ದಾರೆ.

Leave a Reply

comments

Related Articles

error: