ಮೈಸೂರು

ಸೇಠ್ ರಾಜೀನಾಮೆ ನೀಡುವುದು ಬೇಡ: ಟವರ್ ಏರಿ ಪ್ರತಿಭಟನೆ

ಸಚಿವ ತನ್ವೀರ್ ಸೇಠ್ ಯಾವುದೇ ತಪ್ಪು ಮಾಡಿಲ್ಲ. ಅವರು ರಾಜೀನಾಮೆ ನೀಡಬಾರದೆಂದು ಆಗ್ರಹಿಸಿ ಅವರ ಅಭಿಮಾನಿಯೊಬ್ಬ ಮಂಗಳವಾರದಂದು ಟವರ್ ಏರಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಕಾರ್ಯಕರ್ತ ಫಿರೋಜ್‍ ಖಾನ್ ಕತ್ತಿಗೆ ತನ್ವೀರ್ ಸೇಠ್ ಭಾವಚಿತ್ರವನ್ನು ನೇತು ಹಾಕಿಕೊಂಡು ಟವರ್‍ ಏರಿ ಘೋಷಣೆಗಳನ್ನು ಕೂಗಿ ವಿಭಿನ್ನವಾಗಿ ಪ್ರತಿಭಟಿಸಿದರು.

ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ವೇದಿಕೆ ಮೇಲೆ ಕುಳಿತಿದ್ದ ಸಚಿವ ತನ್ವೀರ್ ಸೇಠ್ ಅವರು ಮೊಬೈಲಿನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿರುವುದನ್ನು ಮಾಧ್ಯಮ ಸೆರೆಹಿಡಿದಿತ್ತು. ಈ ಸುದ್ದಿಯು ರಾಜ್ಯಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದು, ಸೇಠ್ ಅವರು ರಾಜೀನಾಮೆ ನೀಡಬೇಕೆಂದು ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವೆಡೆ ತನ್ವೀರ್ ಸೇಠ್ ಯಾವುದೇ ತಪ್ಪು ಮಾಡಿಲ್ಲ. ರಾಜೀನಾಮೆ ನೀಡುವುದು ಬೇಡ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

whatsapp-image-2016-11-15-at-1-07-19-pm

Leave a Reply

comments

Related Articles

error: