ಮೈಸೂರು

ಜೀವಮಾನ ಸಾಧನೆಗಾಗಿ ಪ್ರಶಸ್ತಿ ಪಡೆದ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಹೆಬ್ ಗೆ ಸನ್ಮಾನ

ಮೈಸೂರು,ಡಿ.14-ತಮ್ಮ ಜೀವಮಾನದ ಸಾಧನೆಗಾಗಿ ಇಂಡಿಯನ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್ ವತಿಯಿಂದ ಪ್ರಶಸ್ತಿ ಪಡೆದ ಮೈಸೂರಿನ ಸರ್ ಖಾಜಿಯವರಾದ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಹೆಬ್ ಅವರನ್ನು ನಗರದ ಇರ್ವಿನ್ ರಸ್ತೆಯಲ್ಲಿರುವ ಅಲ್ ಮುಜಾಹಿದ್ ನೌಜವಾನ್ ಮೀಲಾದ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಮಿಟಿ ಅಧ್ಯಕ್ಷ ಅಬ್ದುಲ್ಲಾ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಹೆಬ್ ಅವರ ಬಗ್ಗೆ ಪರಿಚಯಿಸಿದರು. ಸಮಾಜ ಸೇವಕರಾದ ಮಿರ್ಜಾ ಜಂಷೀದ್ ಬೇಗ್ ಅಶ್ರಫಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಬೇದುಲ್ಲಾ ಖಾನ್ ಮತ್ತು ಸಕೀಬುಲ್ಲಾ ಖಾನ್ ಸ್ವಾಗತ ಭಾಷಣ ಮಾಡಿದರು. ಅಮೀನುಲ್ಲಾ ಖಾನ್ ವಂದನಾರ್ಪಣೆ ಮಾಡಿದರು. (ವರದಿ-ಜಿ.ಕೆ, ಎಂ.ಎನ್)

Leave a Reply

comments

Related Articles

error: