
ದೇಶ
ಕಪ್ಪು ಹಣ ತಡೆ: ಬೆರಳಿಗೆ ಶಾಹಿ ಗುರುತು
500 ಹಾಗೂ 1 ಸಾವಿರ ರೂಪಾಯಿ ಹಳೆ ನೊಟುಗಳನ್ನು ಬದಲಿಸಿಕೊಳ್ಳುವ ಗ್ರಾಹಕರ ಬೆರಳಿಗೆ ಶಾಹಿ ಗುರುತು ಹಾಕುವಂತೆ ಸರ್ಕಾರ ಸೂಚಿಸಿದ್ದು, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಮಂಗಳವಾರ ಈ ಬಗ್ಗೆ ಘೋಷಿಸಿದ್ದಾರೆ.
ಕಾಳಧನವನ್ನು ಅಧಿಕೃತಗೊಳಿಸಿಕೊಳ್ಳಲು ಈಗಾಗಲೇ ಹಲವಾರು ಬಾರಿ ಬ್ಯಾಂಕ್ಗಳಿಗೆ ಭೇಟಿ ನೀಡಿ ಬದಲಾಯಿಸಿಕೊಳ್ಳಲು ಪ್ರಯತ್ನಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಎಟಿಎಂ ಅಲ್ಲಿ ಚಿಲ್ಲರೆ ನೋಟುಗಳು ಲಭ್ಯ : ಚಿಲ್ಲರೆ ಸಮಸ್ಯೆ ನಿವಾರಣೆಗಾಗಿ ಶೀಘ್ರದಲ್ಲಿಯೇ ಎಟಿಎಂಗಳಿಗೆ 50 ರೂ ಹಾಗೂ 20 ರೂ ಮುಖಬೆಲೆಯ ನೋಟುಗಳನ್ನು ತುಂಬಲಾಗುವುದು ಎಂದು ಎಸ್.ಬಿ.ಐ ಚೇರ್ಮನ್ ಅರುಂಧತಿ ಭಟ್ಟಾಚಾರ್ಯ ಘೋಷಿಸಿದ್ದಾರೆ.
500 ರೂ ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಆರ್ಥಿಕ ವಹಿವಾಟಿನಲ್ಲಿ ಏರುಪೇರುಂಟಾಗಿತ್ತು. ಚಿಲ್ಲರೆ ಇಲ್ಲದೆ ಗ್ರಾಹಕರು ಪರದಾಡುವಂತಾಗಿತ್ತು. ವ್ಯಾಪಾರದ ಮೇಲೂ ಗಂಭೀರ ಪರಿಣಾಮ ಬೀರಿದೆ. ಬೀದಿ ಬದಿ ಸಣ್ಣ ವ್ಯಾಪಾರಿಗಳು ಚಿಲ್ಲರೆ ಹಣವಿಲ್ಲದೆ ವ್ಯಾಪಾರವನ್ನು ಕೈಬಿಟ್ಟಿದ್ದಾರೆ. ಸಮಸ್ಯೆ ನಿವಾರಣೆಗಾಗಿ ಅತಿಶೀಘ್ರದಲ್ಲಿಯೇ ಕಡಿಮೆ ಮೊತ್ತದ ನೋಟುಗಳು ಎಟಿಎಂಗಳಲ್ಲಿ ಲಭ್ಯವಾಗಲಿವೆ.