ಮೈಸೂರು

‘ಹೈಕಮಾಂಡ್’ ಚಿತ್ರದ ಆಡಿಷನ್ ನ.17 ರಂದು

ಬುದ್ಧ ಸಿನಿ ಕಂಬೈನ್ಸ್ ಸಂಸ‍್ಥೆಯು ‘ಹೈಕಮಾಂಡ್’ ಚಿತ್ರವನ್ನು ನಿರ್ಮಿಸುತ್ತಿದ್ದು, ಹೊಸ ಕಲಾವಿದರನ್ನು ಪರಿಚಯಿಸುವ ಸಲುವಾಗಿ ಮೈಸೂರಿನಲ್ಲಿ ನ.17 ರಂದು ಕಲಾವಿದ ಸಂದರ್ಶನವನ್ನು ಏರ್ಪಡಿಸಲಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ನಾಗೇಂದ್ರ ಮಾಗಡಿ ಅವರು ಹೇಳಿದರು.

ನಗರದ ಪತ್ರಕರ್ತ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ನಲ್ಲಿ ಆಡಿಷನ್ಸ್ ನಡೆಯಲಿದೆ. ಆಸಕ್ತರು ಈ ದಿನ ಭಾಗವಹಿಸಿ ಆಯ್ಕೆ ಮಂಡಳಿ ಎದುರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ. ಒಬ್ಬ ಕಲಾವಿದನಿಗೆ 5 ನಿಮಿಷಗಳ ಕಾಲಾವಧಿಯನ್ನು ನಿಗದಿ ಮಾಡಲಾಗಿದೆ. ಜೊತೆಗೆ 2 ಭಾವಚಿತ್ರಗಳನ್ನು ತರಬೇಕು ಎಂದು ಹೇಳಿದರು.

ಮಾಜಿ ಸಚಿವ ಸತೀಶ್ ಜಾರಕಿ ಹೊಳಿ ಅವರು ನಿರ್ಮಿಸುತ್ತಿರುವ ಈ ಚಿತ್ರವು ರಾಜಕೀಯ ವಿಡಂಬನಾತ್ಮಕತೆಯನ್ನು ಹಾಸ್ಯದ ಮೂಲಕ ತೋರಿಸುತ್ತದೆ.      ಈಗಾಗಲೇ ಬೆಳಗಾವಿ, ಕಲ್ಬುರ್ಗಿ, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ ಆಡಿಷನ್ಸ್ ನಡೆದಿದೆ. ನಂತರ ಬಳ್ಳಾರಿ, ಮಂಗಳೂರು ಮತ್ತು ರಾಯಚೂರಿನಲ್ಲಿ ಆಯ್ಕೆ ನಡೆಯಬೇಕಾಗಿದೆ. ಬೆಂಗಳೂರಿನಲ್ಲಿ ಅಂತಿಮ ಘಟ್ಟದ ಆಡಿಷನ್ ನಡೆಸಿ, ಅದರಲ್ಲಿ ಆಯ್ಕೆ ಆದವರಿಗೆ ಚಿತ್ರದಲ್ಲಿ ನಟಿಸಲು ಅವಕಾಶ ಕೊಡಲಾಗುತ್ತದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಸದಸ್ಯ ಮಹದೇವ್, ಸತೀಶ್ ಜಾರಕಿ ಹೊಳಿ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕ ಎಸ್. ಆರ್ ರವಿ ಮತ್ತು ಅನುಸೂಯ ಉಪಸ್ಥಿತರಿದ್ದರು.

Leave a Reply

comments

Related Articles

error: