ಕರ್ನಾಟಕ

ಸೋದರಿಗೆ ಕ್ಯಾನ್ಸರ್ : ಮನ ನೊಂದು ತಮ್ಮ ಆತ್ಮಹತ್ಯೆ

ಬೆಂಗಳೂರು,ಡಿ.15: ಸೋದರಿಗೆ ಕ್ಯಾನ್ಸರ್ ಬಂದಿದ್ದರಿಂದ ನೊಂದು ಆತ್ಮಹತ್ಯೆಗೆ ಘಟನೆ ವಿಜಯನಗರ ಸಮೀಪದ ಪ್ರಶಾಂತ್ ನಗರದಲ್ಲಿ ನಡೆದಿದೆ.

ಕುಂದಾಪುರದ ನಗರದ ದೇವರಬೀಸನಹಳ್ಳಿಯಲ್ಲಿರುವ `ವೆಲ್ಸ್ ಫಾರ್ಗೊ’ ಬ್ಯಾಂಕ್‍ನಲ್ಲಿ ತಾಂತ್ರಿಕ ತಂಡದ ಲೀಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಹರ್ಷಿತ್ ಶೆಟ್ಟಿ (32)ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೃತ ಹರ್ಷಿತ್ ತಾಯಿ 2002ರಲ್ಲಿ, ತಂದೆ 2005ರಲ್ಲಿ ಕ್ಯಾನ್ಸರ್‍ನಿಂದ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದ ಹರ್ಷಿತ್, ಬಳಿಕ ಅಕ್ಕ ಆಶಾ ಶೆಟ್ಟಿ ಅವರ ಆಶ್ರಯದಲ್ಲೇ ಬೆಳೆದಿದ್ದರು. ಆದರೆ ಇದೀಗ ಅಕ್ಕನಿಗೂ ಕ್ಯಾನ್ಸರ್ ಬಂದಿದ್ದರಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದ ಹರ್ಷಿತ್ ಮನನೊಂದು ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  (ವರದಿ: ಪಿ. ಎಸ್ )

Leave a Reply

comments

Related Articles

error: