ಮೈಸೂರು

‘ಪ್ರೇತಂಭಟ್ಟರ ನಿಂತಿಲ್ಲರು’ ಕಾದಂಬರಿ ಆವಿಷ್ಕರಣ ನ.16ರಂದು

ವಿದ್ಯಾವಿಕಾಸ ಶಿಕ್ಷಣ ಸಂ‍ಸ್ಥೆಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ದಕ್ಷಿಣ ಕನ್ನಡಿಗರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹೆಸರಾಂತ ಲೇಖಕ ಪ್ರೊ.ಕೆ.ಈ.ರಾಧಾಕೃಷ್ಣ ಅವರ ಕನ್ನಡ ಕಾದಂಬರಿ ‘ಪ್ರೇತಂಭಟ್ಟರ ನಿಂತಿಲ್ಲರು’ ಮತ್ತು ‘ಪ್ರೇತಂಭಟ್ಟೆರೆ ನಿಂತಿಲ್ಲೆರ್’ ತುಳು ಕಾದಂಬರಿಯನ್ನು ಬುಧವಾರ ಬೆ.11.30ಕ್ಕೆ ಮಾನಸಗಂಗೋತ್ರಿಯ  ಬಹುದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಇಲ್ಲಿ ಆವಿಷ್ಕರಣ ಮಾಡಲಾಗುತ್ತದೆ ಎಂದು ಚಾಮರಾಜ ಕ್ಷೇತ್ರದ ಶಾಸಕ ವಾಸು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಕಾದಂಬರಿಗಳ ಆವಿಷ್ಕರಣವನ್ನು ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ  ಅವರು ನೆರವೇರಿಸಲಿದ್ದಾರೆ. ಚಾಮರಾಜ ಕ್ಷೇತ್ರದ ಶಾಸಕ ವಾಸು ಅಧ್ಯಕ್ಷತೆ ವಹಿಸಲಿದ್ದಾರೆ. ಕಾದಂಬರಿಯ ಅವಲೋಕನವನ್ನು ಕರ್ನಾಟಕ ಸಂಸ್ಕೃತ ವಿವಿಯ ಕುಲಪತಿ ಡಾ. ಪದ್ಮಾಶೇಖರ್ ಮತ್ತು ಹಿರಿಯ ವಿಮರ್ಶಕ ಡಾ.ಸಿ.ನಾಗಣ್ಣ ಮಾಡಲಿದ್ದಾರೆ. ಕರ್ನಾಟಕ ಸಂಸ್ಕೃತ ವಿವಿಯ ನಿಕಟಪೂರ್ವ ಕುಲಪತಿ ಡಾ.ಮಲ್ಲೇಪುರಂ ಜಿ. ವೆಂಕಟೇಶ ಅವರು ಮುಖ್ಯ ಅತಿಥಿಗಳಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ‍್ಯಕ್ಷ ಡಾ.ವೈ.ಡಿ.ರಾಜಣ್ಣ ಮತ್ತು ದಕ್ಷಿಣ ಕನ್ನಡ ಸಂಘದ ಅಧ‍್ಯಕ್ಷ ವಿ. ಶ್ರೀನಿವಾಸ ರಾವ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ವಿದ್ವಾಂಸ, ಇತಿಹಾಸಕಾರ ಹಾಗೂ ಮಂಗಳೂರು ಮತ್ತು ಗೋವಾ ವಿವಿ ಗಳ ವಿಶ್ರಾಂತ ಕುಲಪತಿ ಪ್ರೊ.ಬಿ.ಶೇಕ್ ಆಲಿ ಮತ್ತು ನಿವೃತ್ತ ಮುಖ್ಯ ಇಂಜಿನಿಯರ್ ಬಾಪು ಸತ್ಯನಾರಾಯಣ ಅವರನ್ನು ಸನ್ಮಾನಿಸಿ ಅಭಿನಂದಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಲೇಖಕ ಪ್ರೊ.ಕೆ.ಈ. ರಾಧಾಕೃಷ್ಣ, ಜನಾರ್ಧನ್, ಭಂಡಾರಿ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: