
ಮೈಸೂರು
ನೋಟುಗಳ ರದ್ಧತಿಯನ್ನು ಕೂಡಲೇ ಹಿಂಪಡೆಯಿರಿ : ಎಸ್ ಯುಸಿಐ ಆಗ್ರಹ
ಕೇಂದ್ರ ಸರ್ಕಾರ ಕೂಡಲೇ ನೋಟುಗಳ ರದ್ಧತಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಸೋಷಿಯಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರಿನ ಗಾಂಧಿವೃತ್ತದ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಎರಡೂವರೆ ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಮೋದಿಯವರು ಚುನಾವಣೆಯಲ್ಲಿ ನೀಡಿದ ಯಾವ ಭರವಸೆಗಳನ್ನೂ ಈಡೇರಿಸಲಾಗಿಲ್ಲ. ವಿದೇಶದ ಕಪ್ಪು ಹಣ ಭಾರತಕ್ಕೆ ಬಂದಿಲ್ಲ. ಬ್ಯಾಂಕುಗಳಿಂದ ದೊಡ್ಡ ಕೈಗಾರಿಕೋದ್ಯಮಿಗಳು ಪಡೆದ 6,00,000ಕೋಟಿಗೂ ಹೆಚ್ಚಿನ ಸಾಲ ಮರುಪಾವತಿಯಾಗುತ್ತಿಲ್ಲ ಎಂದು ಆರೋಪಿಸಿದರು. 500, 1000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವುದರಿಂದ ಬಡ ಮಧ್ಯಮ ವರ್ಗದ ಜನರು ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲಾಗದೇ ಸಂಕಷ್ಟಕ್ಕೀಡಾಗಿದ್ದಾರೆ. ರೈತರು ತಮ್ಮ ಫಸಲುಗಳಿಗೆ ಹಣ ಪಡೆಯಲಾರದೇ ಕಂಗಾಲಾಗುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಈ ಮೋಸದ ಕ್ರಮವನ್ನು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷವು ತೀವ್ರವಾಗಿ ವಿರೋಧಿಸುತ್ತದೆ. ಜನರ ಮೇಲೆ ಹೇರಲಾಗಿರುವ ಈ ತರ್ಕಹೀನ ಹೊರೆಯನ್ನು ತೆಗೆಯಲು ಕೇಂದ್ರಸರ್ಕಾರ ತಕ್ಷಣವೇ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.