ಕರ್ನಾಟಕ

ಕಳಸಾ ಬಂಡೂರಿ ಸಮಸ್ಯೆಗೆ ಪರಿಹಾರ ನೀಡದಿದ್ದಲ್ಲಿ ಮುಂದಿನ ಚುನಾವಣೆಗೆ ಬಹಿಷ್ಕಾರ: ಕಳಸಾ ಬಂಡೂರಿ ಹೋರಾಟಗಾರರು

ಬೆಂಗಳೂರು,ಡಿ.15-ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹದಾಯಿ ಕಳಸಾ ಬಂಡೂರಿ ಸಮಸ್ಯೆಗೆ ಶ್ವಾಶತ ಪರಿಹಾರ ನೀಡದಿದ್ದಲ್ಲಿ 2018ರ ಚುನಾವಣೆಯನ್ನು ಬಹಿಷ್ಕಾರಿಸಲಾಗುವುದು ಎಂದು ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮಹದಾಯಿ ಕಳಸಾ ಬಂಡೂರಿ ಹೋರಾಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದರೆ ವಿನಃ ಶ್ವಾಶತ ಪರಿಹಾರ ನೀಡಲು ಮುಂದಾಗಿಲ್ಲ. ಇವರು ಬ್ರಿಟಿಷರಿಗಿಂತ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ್ ಕುಲಕರ್ಣಿ ಆರೋಪಿಸಿದ್ದಾರೆ.

ನಗರದಲ್ಲಿಂದು ಪುರಭವನದಲ್ಲಿ ಜನ ಸಾಮಾನ್ಯರ ವೇದಿಕೆ ಕರ್ನಾಟಕ ಹಾಗೂ ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿ ಜಂಟಿಯಾಗಿ ಆಯೋಜಿಸಿದ್ದ, ರಾಜ್ಯದ ನೆಲ, ಜಲ, ಭಾಷೆಯ ರಕ್ಷಣೆ ಹಾಗೂ ಪ್ರಾದೇಶಿಕ ಅಸಮಾನತೆ ಕುರಿತ ನಿರ್ಣಾಯಕ ಸಭೆಯಲ್ಲಿ ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು, ರಾಜ್ಯ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಹೀಗಾಗಿ, ಮುಂದಿನ ಚುನಾವಣಾಯನ್ನೇ ಬಹಿಷ್ಕಾರ ಮಾಡಲಾಗುವುದು ಎಂದರು. ಈ ಸಭೆ ರಾಜಕೀಯ ಹಿತಕ್ಕೆ ಮಾಡಲಾಗುತ್ತಿದೆ. ಹೀಗಾಗಿ, ಈ ಸಭೆಯೇ ಬೇಡ ಎಂದು ಕೆಲ ಹೋರಾಟಗಾರರು ಸಭೆಯಿಂದ ಹೊರನಡೆದರು.

ಪತ್ರಕರ್ತ ಮಹದೇವ ಪ್ರಕಾಶ್ ಮಾತನಾಡಿ, ಉತ್ತರ ಕರ್ನಾಟಕ ಸಮಸ್ಯೆ ಒಂದನ್ನು ಗುರಿಯಾಗಿಸಿಕೊಂಡು ಸಭೆಯಲ್ಲಿ ಚರ್ಚೆ ನಡೆಸುವುದು ಬೇಡ ಎಂದು ನೀಡಿದ ಕಾರಣ, ಭಾರೀ ಸಂಖ್ಯೆಯಲ್ಲಿ ಅವರ ಮಾತನ್ನು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ದರಾಮ ಸ್ವಾಮೀಜಿ ಮಾತನಾಡಿ, ಕರ್ನಾಟಕ ಅಭಿವೃದ್ಧಿಗೆ ಸರ್ಕಾರವೂ ತಾರತಮ್ಯವನ್ನು ಮಾಡಿದ ಕಾರಣ , ಪ್ರತ್ಯೇಕ ರಾಜ್ಯದ ಕೂಗು ಆ ಭಾಗದ ಜನರಲ್ಲಿ ಮೂಡಿದೆ ಎಂದು ಹೇಳಿದರು.

ಯಾವುದೇ ಪಕ್ಷದ ಸರ್ಕಾರ ರಾಜ್ಯದಲ್ಲಿ ಆಡಳಿತದ ನಡೆಸಲಿ. ಆದರೆ,ದಕ್ಷಿಣ ಕರ್ನಾಟಕ ಅಭಿವೃದ್ಧಿಗೆ ನೀಡುವ ಒತ್ತುನ್ನು ಉತ್ತರ ಕರ್ನಾಟಕಕ್ಕೆ ನೀಡಿಲ್ಲ. ಇಂದಿಗೂ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಈ ಭಾಗ ತೀರ ಹಿಂದುಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವೂ ನಂಜುಂಡಪ್ಪ ವರದಿ ಅನ್ವಯ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಹಣ ಮೀಸಲು ಇಟ್ಟಿಲ್ಲ. ರಸ್ತೆ, ನೀರಾವರಿ, ಶಿಕ್ಷಕರ ಕೊರತೆ, ಬಡತನ ಸೇರಿದಂತೆ ನಾನಾ ಸಮಸ್ಯೆಗಳಿಂದ ಅಲ್ಲಿನ ಜನರು ಭಾರಿ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆ. ಇನ್ನು ಗೋವಾ ರಾಜ್ಯಕ್ಕೆ ಹೋದರೆ ಅಲ್ಲಿಯೂ ಸೂಕ್ತ ರಕ್ಷಣೆ, ಸವಲತ್ತುಗಳು ಇಲ್ಲದೆ ಜನ ನೊಂದಿದ್ದಾರೆ ಎಂದು ಹೇಳಿದರು.

ರಾಜಕಾರಣಿಗಳ ನಿರ್ಲಕ್ಷ್ಯದಿಂದಲೇ ಇಂದು ನಮ್ಮ ಲ್ಲಿನ ನೆಲ, ಜಲ, ಭಾಷೆಯ ಸ್ಥಾನವನ್ನು ಕಳೆದುಕೊಂಡಿದ್ದೇವೆ. ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಮಹಾರಾಷ್ಟ್ರಕ್ಕೆ ನಮ್ಮ ನೆಲ ನೀಡಿ, ಕಳೆದುಕೊಂಡಿದ್ದೇವೆ ಎಂದ ಅವರು, ಬೆಳಗಾವಿ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವುದು ತಪ್ಪು. ಅದು ಎಂದಿಗೂ ಕರ್ನಾಟಕಕ್ಕೆ ಸೇರಿದ್ದು ನುಡಿದರು.

ಸಭೆಯಲ್ಲಿ ಜೆಡಿಯು ಮುಖಂಡ ನಾಡೇಗೌಡ, ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ), ಜನ ಸಾಮಾನ್ಯರ ವೇದಿಕೆಯ ರಾಜ್ಯಾಧ್ಯಕ್ಷ ಡಾ.ಅಯ್ಯಪ್ಪ, ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಟಿ.ವಿ.ಸತೀಶ್, ಹೋರಾಟಗಾರ ಆಂಜನೇಯರೆಡ್ಡಿ ಸೇರಿ ಪ್ರಮುಖರಿದ್ದರು. (ವರದಿ-ಕೆ.ಎಸ್, ಎಂ.ಎನ್)

Leave a Reply

comments

Related Articles

error: