ಕರ್ನಾಟಕಮೈಸೂರು

ನ.18,19 ಮತ್ತು 20 ರಂದು ಆಳ್ವಾಸ್ ನುಡಿಸಿರಿ

ಮೂಡುಬಿದಿರೆಯ ಆಳ್ವಾಸ್ ನುಡಿಸಿರಿ -2016 ವಾರ್ಷಿಕ ಹಬ್ಬವನ್ನು ನ.18,19 ಮತ್ತು 20 ರಂದು ಹಮ್ಮಿಕೊಳ್ಳಲಾಗಿದೆ ಎಂದು ಆಳ್ವಾಸ್ ನುಡಿಸಿರಿ ಸಮಿತಿ ಕಾರ್ಯದರ್ಶಿ ದಿವ್ಯಾಧರ ಶೆಟ್ಟಿ ಕೆರಾಡಿ ಎವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕರ್ನಾಟಕ- ನಾಳೆಗಳ ನಿರ್ಮಾಣ’  ಸಮ್ಮೇಳನದ ಪರಿಕಲ್ಪನೆಯಾಗಿದೆ. ಡಾ. ಬಿ.ಎನ್.ಸುಮಿತ್ರಾ ಬಾಯಿ ಸಮ್ಮೇಳನಾಧ್ಯಕ್ಷರಾಗಿರುತ್ತಾರೆ. ಖ್ಯಾತ ಸಾಹಿತಿ ಡಾ.ಜಯಂತ್ ಕಾಯ್ಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕವಿಗೋಷ್ಠಿಗಳು ನಡೆಯಲಿವೆ. ನ.20 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ 13 ಮಂದಿ ಸಾಧಕರಿಗೆ ‘ಆಳ್ವಾಸ್ ನುಡಿಸಿರಿ ಪ್ರಶಸ್ತಿ’ ನೀಡಲಾಗುತ್ತದೆ.

3 ದಿನಗಳ ಕಾಲ ಹತ್ತು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಲರವ ಜರುಗಲಿದೆ. ಸಾಂಸ್ಕೃತಿಕ ಮೆರವಣಿಗೆ, ವಿದ್ಯಾರ್ಥಿ ಸಿರಿ, ಚಿತ್ರ ಸಿರಿ, ಕೃಷಿ ಸಿರಿ, ಸಿನಿಸಿರಿ, ಛಾಯಾಚಿತ್ರ ಸಿರಿ, ಕುಸ್ತಿಸಿರಿ ಇನ್ನೂ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದ್ದು, ಪ್ರತಿನಿಧಿಯಾಗ ಬಯಸುವವರು 100 ರೂ. ಶುಲ್ಕ ಪಾವತಿಸಬೇಕು ಎಂದು  ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ನುಡಿಸಿರಿಯ ಕಾರ್ಯದರ್ಶಿಗಳಾದ ಶಿವಪ್ರಸಾದ ಎಂ. ಹಾಗೂ ಪ್ರಸಾದ್ ಶೆಟ್ಟಿ ಹಾಜರಿದ್ದರು.

Leave a Reply

comments

Related Articles

error: