ಮೈಸೂರು

ಕುಂಚಿಟಿಗರ ಸಂಘದಲ್ಲಿ ಅವ್ಯವಹಾರ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ

ಮೈಸೂರು, ಡಿ. 16 : ನಗರದ ಕುಂಚಿಟಿಗರ ಆಡಳಿತ ಮಂಡಳಿ ಎಸಗಿರುವ ಅವ್ಯವಹಾರ, ಅಕ್ರಮಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು  ಕಳೆದ ದಿ.10ರಂದು ಕುಂಚಿಟಿಗರ ಸಂಘದ ಸದಸ್ಯರ ಸಭೆಯೂ ಒತ್ತಾಯಿಸಿದ್ದು ಈ ಕುರಿತಂತೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕೆಂದು ಸಂಘದ ಸದಸ್ಯರು ಆಗ್ರಹಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಎನ್.ಪ್ರದೀಪ್ ಕುಮಾರ್ ಮೊದಲಾದವರು  ಮಾತನಾಡಿ ಸಂಘದ ಆಡಳಿತ ಮಂಡಳಿಯೂ ಹಣ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪ ಸಾಭೀತಾಗಿದೆ, ಅಧ ರೀತಿ ಚುನಾವಣಾ ಹಿನ್ನಲೆಯಲ್ಲಿ ಅಕ್ರಮವಾಗಿ ಅನ್ಯ ಸಮುದಾಯದವರಿಲ್ಲದವರಿಗೆ ಸದಸ್ಯತ್ವ ನೀಡಲಾಗಿದೆ ಎಂದು ಆರೋಪಿಸಿದರು.

ಸನ್ನದು ಲೆಕ್ಕಿಗರಾದ ಹರಿಹರನ್ ಮತ್ತು ಪೆರುಮಾಳ್ ಅವರು ಈ ಅಕ್ರಮಗಳಿಗೆ ಕಾರಣರಾಗಿದ್ದು ಇವರುಗಳ ವಿರುದ್ಧ ಸಂಘ ಸಂಸ್ಥೆಗಳ ರಾಜ್ಯ ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿ ಮೊದಲಾದವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅಲ್ಲದೇ, ಸಂಘದ ಮುಂದಿನ ಚುನಾವಣೆಯಲ್ಲಿ ಈ ತಪ್ಪಿತಸ್ಥರು ಪಾಲ್ಗೊಳ್ಳಬಾರದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ವಿವರಿಸಿದರು.

ಈ ಕುರಿತಂತೆ ರಾಜ್ಯಪಾಲರಿಗೆ, ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಎಂ.ಆರ್.ಯೋಗೀಶ್, ಆರ್.ಸತೀಶ್, ಎನ್.ವಿಶ್ವನಾಥ್, ವಿಕ್ರಮ್ ಮಹದೇವ್, ಕೆ.ಹೆಚ್.ಅಮರ್ ನಾಥ್ ಕುಮಾರ್ ಮೊದಲಾದವರು ಇದ್ದರು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: