ಮೈಸೂರು

ಶ್ರೀ ಭಕ್ತ ಕನಕದಾಸ 529 ನೇ ಜಯಂತ್ಯುತ್ಸವ ನ.17 ರಂದು

ಸಂತ ಶ್ರೀ ಕನಕದಾಸ ಜಯಂತ್ಯೋತ್ಸವ ಸಮಿತಿ ವತಿಯಿಂದ ಶ್ರೀ ಭಕ್ತ ಕನಕದಾಸ 529 ನೇ ಜಯಂತ್ಯೋತ್ಸವವನ್ನು ಹಮ್ಮಿಕೊ‍ಳ್ಳಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಬ್ಯಾಂಕ್ ಎಂ.ಪುಟ್ಟಸ್ವಾಮಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನ.17 ರಂದು ಬೆ.10 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟು, ಕಲಾಮಂದಿರ ತಲುಪಲಾಗುತ್ತದೆ. ಅಲ್ಲಿ 12.30 ಕ್ಕೆ  ಸಭಾ ಕಾರ್ಯಕ್ರಮವಿರುತ್ತದೆ. ನಂತರ ಸಂಜೆ 5.30 ಕ್ಕೆ ಜಗನ್ಮೋಹನ ಅರಮನೆಯ ಹಕ್ಕ-ಬುಕ್ಕ ಮಂಟಪದಲ್ಲಿ ಸಚಿವ ಹೆಚ್. ಸಿ. ಮಹದೇವಪ್ಪ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ತನ್ವೀರ್ ಸೇಠ್, ಶಾಸಕ ವಾಸು, ಮೇಯರ್ ಬಿ.ಎಲ್.ಭೈರಪ್ಪ  ಇನ್ನಿತರರು ಉಪಸ‍್ಥಿತರಿರುತ್ತಾರೆ. ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ‍್ಯಕ್ಷ ಡಿ. ಧ್ರುವಕುಮಾರ್, ಕಾಡಾ ಅಧ್ಯಕ್ಷ ಶಿವಲಿಂಗಯ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ. ಸಿದ್ದರಾಜು, ಕರ್ನಾಟಕ ,ಮೃಗಾಲಯ  ಅಧ್ಯಕ್ಷೆ ಮಲ್ಲಿಗೆ ವೀರೇಶ್ ಇನ್ನಿತರರಿಗೆ ಸನ್ಮಾನಿಸಲಾಗುತ್ತದೆ.

ಎಸ್ಎಸ್ಎಸ್ ಸಿ ಪರೀಕ್ಷೆಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕ ಗಳಿಸಿದ 80 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ನ.18 ಮತ್ತು 19 ರಂದು ಸಂಜೆ 5.30 ಕ್ಕೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಜೆ. ಮಹದೇವಪ್ಪ, ಸಿದ್ದನಾಗೇಂದ್ರ, ವಿಶ್ವನಾಥ್ ಇನ್ನಿತರರು ಹಾಜರಿದ್ದರು.

Leave a Reply

comments

Related Articles

error: