ಕರ್ನಾಟಕ

ಜಲಸಂಪನ್ಮೂಲ ಇಲಾಖೆಯ 246 ಹುದ್ದೆ: ಕೆಪಿಎಸ್‍ಸಿಯಿಂದ ಮೂಲ ದಾಖಲೆಗಳ ಪರಿಶೀಲನೆ

ಬೆಂಗಳೂರು (ಡಿ.16): ಕರ್ನಾಟಕ ಲೋಕಸೇವಾ ಆಯೋಗವು ಜಲಸಂಪನ್ಮೂಲ ಇಲಾಖೆಯ ಕಿರಿಯ ಅಭಿಯಂತರರ (ಸಿವಿಲ್) 246 ಹುದ್ದೆಗಳಿಗೆ ತಾತ್ಕಾಲಿಕವಾಗಿ ಅರ್ಹರಾದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಡಿಸೆಂಬರ್ 14 ಮತ್ತು ರಂದು ಆಯೋಗದ ಕೇಂದ್ರ ಕಚೇರಿ, ಉದ್ಯೋಗ ಸೌಧ, ಬೆಂಗಳೂರು ಇಲ್ಲಿ ನಡೆಸಲಿದೆ.
ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ಈಗಾಗಲೇ ತ್ವರಿತ ಅಂಚೆ ಮೂಲಕ ರವಾನಿಸಿದೆ. ಅರ್ಹ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಆಯೋಗದ ವೆಬ್‍ಸೈಟ್ http://kpsc.kar.nic.in ಅಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಸೂಚನಾ ಪತ್ರಗಳನ್ನು ಆಯೋಗದ ಅಂತರ್ಜಾಲದಿಂದ ಅಪ್ಲಿಕೆಷನ್ ಐಡಿ ಮತ್ತು ಜನ್ಮ ದಿನಾಂವನ್ನು ನಮೂದಿಸಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ತಿಳಿಸಿದೆ.
(ಎನ್‍ಬಿಎನ್‍)

Leave a Reply

comments

Related Articles

error: