ಸುದ್ದಿ ಸಂಕ್ಷಿಪ್ತ
ಕ್ರಿಸ್ಮಸ್ ದಿನಾಚರಣೆ ಮತ್ತು ಕ್ಯಾಲೆಂಡರ್ ಬಿಡುಗಡೆ ಡಿ.19
ಮೈಸೂರು, ಡಿ. 16 :ಕ್ರೈಸ್ತರ ಪ್ರಗತಿಪರ ಸಂಸ್ಥೆ ವತಿಯಿಂದ ಡಿ. 19ರ ಬೆಳಗ್ಗೆ 10.30ಕ್ಕೆ ಸೆಂಟ್ ತೇರೆಸಾ ರಸ್ತೆಯಲ್ಲಿರುವ ಸಿಎಸ್ಐ ವೆಸ್ಲೆ ಚರ್ಚ್ ನ ಗೈಡ್ ಹಾಲ್ ನಲ್ಲಿ ಅಂಧರೊಂದಿಗೆ ಕ್ರಿಸ್ಮಸ್ ಆಚರಣೆ ಹಾಗೂ ಕ್ಯಾಲೆಂಡರ್ ಬಿಡುಗಡೆಯನ್ನು ಏರ್ಪಡಿಸಿದೆ.
ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಇವಾನ್ ಡಿಸೋಜಾ, ನ್ಯಾಯವಾದಿ ಎಂ.ಎಸ್.ಮರಿಯಾ ದಾಸ್, ಪೊಲೀಸ್ ಉಪ ವರಿಷ್ಠಾಧಿಕಾರಿ ಕೆ.ಟಿ.ಮ್ಯಾಥ್ಯೂ ಥಾಮಸ್, ಫಾದ್ರಿ ಬಾಕೆಟ್ ಡಿಸೋಜಾ ಮೊದಲಾದವರು ಭಾಗಿಯಾಗುವರು. (ಕೆ.ಎಂ.ಆರ್)