ಮೈಸೂರು

ಕಾಡಿನಿಂದ ನಾಡಿಗೆ ಬಂದ ಗಜಪಡೆ: ಅಂಬಾರಿ ಆನೆಗೆ ಮಹೇಶ್ ಹೊಸ ಮಾವುತ?

ಕಾಡಿನಿಂದ ನಾಡಿಗೆ ಗಜಪಡೆಗಳು ಆಗಮಿಸಿವೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 10 ದಿನಗಳ ಕಾಲ ನಡೆಯುವ ದಸರೆಯಲ್ಲಿ ಆಕರ್ಷಕ ಕೇಂದ್ರವಾಗಿರುವುದೇ ಈ ಗಜಪಡೆ ಅಂದರೆ ಜಂಬೂ ಸವಾರಿ.

ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಗಜಪಡೆಗಳನ್ನು ಕರೆ ತರುವಾಗ ಸಾಂಸ್ಕೃತಿಕ ಕಲಾ ವೈವಿಧ್ಯಗಳು ಮೈ ತಳೆದಿದ್ದವು. ಕಾಡಿನಿಂದ ನಾಡಿಗೆ ಆನೆಗಳನ್ನು ಕರೆತರುವಾಗ ಕೇವಲ ಸರ್ಕಾರಿ ಸೇವಕರು, ಜನಪ್ರತಿನಿಧಿಗಳಷ್ಟೇ ಅಲ್ಲದೇ ಹಳೆ ಮೈಸೂರು ಪ್ರಾಂತದ ನೂರಾರು ಕಲಾವಿದರು ಪಾಲ್ಗೊಂಡಿದ್ದರು.

ಸಿಂಗಾರಗೊಂಡ ಗಜಪಡೆಗಳ ಪಯಣಕ್ಕೆ ಚಾಲನೆ ನೀಡಿದ ಸಂದರ್ಭ ಕಾಡುಕುಡಿಗಳ ಹಾಗೂ ಗುರುಪುರದ ಟಿಬೆಟಿಯನ್ನರ ಸಾಂಸ್ಕೃತಿಕ ನೃತ್ಯ ವೈಭವ ಗಮನ ಸೆಳೆಯಿತು.

ಇದೀಗ ಇಲವಾಲ ಬಳಿಯ ಅಲೋಕ ಆವರಣದಲ್ಲಿ ಗಜಪಡೆಗಳು ವಾಸ್ತವ್ಯ ಹೂಡಿವೆ. ಪ್ರತಿದಿನ ಭತ್ತ, ಬೆಲ್ಲ ನೀಡಿ ಸಲಹಲಾಗುತ್ತಿದೆ. ವೈದ್ಯ ನಾಗರಾಜ್ ಆನೆಗಳ ತಪಾಸಣೆ ನಡೆಸಲಿದ್ದಾರೆ.

ಸತತ ನಾಲ್ಕನೇ ವರ್ಷ ಅಂಬಾರಿ ಹೊರುತ್ತಿರುವ ಅರ್ಜುನನ ಮಾವುತ ಮಾಸ್ತಿ ಕೆಲ ದಿನಗಳ ಹಿಂದೆ ವಿಧಿವಶರಾಗಿದ್ದು, ಅವರ ಸ್ಥಾನಕ್ಕೆ ಮಗ ಮಹೇಶ್ ಅಲಿಯಾಸ್ ಸಣ್ಣಪ್ಪ ಅವರ ಹೆಸರು ಕೇಳಿ ಬರುತ್ತಿದೆ.

32 ವರ್ಷದ ಮಹೇಶ್ ಅರ್ಜುನನೊಂದಿಗೆ ಒಡನಾಟ ಹೊಂದಿದ್ದಾರೆ ಎನ್ನುವುದೇ ಈ ಚಿಂತನೆಗೆ ಕಾರಣ ಎನ್ನಲಾಗುತ್ತಿದೆ.

Leave a Reply

comments

Tags

Related Articles

error: