ಸುದ್ದಿ ಸಂಕ್ಷಿಪ್ತ
ಮೈಸೂರು ಚಲೋ ಚಳುವಳಿ ದಿನಾಚರಣೆ
ನ.16 ರಂದು ಬೆ.10 ಗಂಟೆಗೆ ಸುಬ್ಬರಾಯನಕೆರೆ ಸ್ಮಾರಕ ಭವನದಲ್ಲಿ ಮೈಸೂರು ಚಲೋ ಚಳುವಳಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಸಚಿವ ಹೆಚ್.ಸಿ.ಮಹದೇವಪ್ಪ ಧ್ವಜಾರೋಹಣ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಶಾಸಕ ವಾಸು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ತನ್ವೀರ್ ಸೇಠ್, ಮೇಯರ್ ಬಿ.ಎಲ್. ಭೈರಪ್ಪ, ಉಪಸಭಾಪತಿ ಮರಿತಿಬ್ಬೇಗೌಡ, ಸಂಸದ ಪ್ರತಾಪ್ ಸಿಂಹ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ.