ಕರ್ನಾಟಕ

ಶ್ರವಣಬೆಳಗೊಳ: ಸಾಮಗ್ರಿಗಳನ್ನು ಮೇಲಕ್ಕೆ ಕೊಂಡೊಯ್ಯಲು 2 ಲಿಫ್ಟ್‍ಗಳ ನಿರ್ಮಾಣ

ಶ್ರವಣಬೆಳಗೊಳ (ಡಿ.18): 2018 ರ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ಅಂಗವಾಗಿ ನಿರ್ಮಾಣಗೊಳ್ಳುತ್ತಿರುವ ಅಟ್ಟಣಿಗೆ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ಶನಿವಾರ ವಿಂಧ್ಯಗಿರಿ ಬೆಟ್ಟ ಹತ್ತಿ ವೀಕ್ಷಿಸಿದರು.

ನಂತರ ಮಾತನಾಡಿ ತ್ವರಿತಗತಿಯಲ್ಲಿ ಕಾಮಗಾರಿ ಕೆಲಸ ನಡೆಯುತ್ತಿದ್ದು ಜನವರಿ ಮೊದಲ ವಾರದಲ್ಲಿ ಅಟ್ಟಣಿಗೆಯ ಸಂಪೂರ್ಣ ಕಾಮಗಾರಿ ಮುಗಿಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಟ್ಟಣಿಗೆ ಕಾಮಗಾರಿ ಭರದಿಂದ ಸಾಗಿದ್ದು ಪೂಜಾ ಸಾಮಗ್ರಿಗಳನ್ನು ಮೇಲಕ್ಕೆ ಕೊಂಡೊಯ್ಯಲು ಅನುಕೂಲವಾಗುವಂತೆ 2 ಲಿಫ್ಟ್‍ಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.

ಮಹಾಮಸ್ತಕಾಭೀಷೇಕ ಮಹೋತ್ಸವದ ವಿಶೇಷಾಧಿಕಾರಿ ವರಪ್ರಸಾದ್ ರೆಡ್ಡಿ ಅಟ್ಟಣಿಗೆಯ ಕುರಿತು ವಿವರಣೆ ನೀಡುತ್ತಾ ಜರ್ಮನ್ ಟೆಕ್ನಾಲಜಿಯ ಸಲಕರಣೆಗಳನ್ನು ಬಳಸುತ್ತಿದ್ದು. ಇವು ತುಕ್ಕು ಹಿಡಿಯುವುದಿಲ್ಲ ಜೊತೆಗೆ ವಿದ್ಯುತ್ ಅವಘಡಗಳು ಸಂಭವಿಸದಂತೆ ಮುನ್ನಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಾಗಿದೆ, ಅಟ್ಟಣಿಗೆಯ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಒಮ್ಮೆಗೆ 6000 ಜನ ಕುಳಿತು ಮಹಾಮಸ್ತಕಾಭಿಷೇಕ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ ಎಂದರು.

ಬಾಹುಬಲಿ ಮೂರ್ತಿ ಇಂಭಾಗದಲ್ಲಿ ಅಂದರೆ ಅಭಿಷೇಕಕ್ಕೆ ತೆರಳುವ ಜಾಗದಲ್ಲಿ ಕೆಳಗಡೆಗೆ ಇನ್ನೂ ಹೆಚ್ಚಿನ ತೂಕ ತಡೆಯುವಂತೆ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಕಂಬಗಳಿಗೂ ಕೆಳಗಡೆ ಮರ ಹಾಗೂ ರಬ್ಬರ್ ಬಳಸುತ್ತಿರುವುದರಿಂದ ತೂಕ ತಡೆಯುವ ಸಾಮಥ್ರ್ಯ ಹೆಚ್ಚಳದ ಜೊತೆಗೆ ವಿದ್ಯುತ್ ಅವಘಡಗಳು ಸಂಭವಿಸುವುದಿಲ್ಲ ಎಂದರು.

ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರಾದ ಜೀವನ್, ಕೃಷ್ಣಪ್ಪ, ಲೇಹರ್ ಕಂಪನಿಯ ಸಹಾಯಕ ವ್ಯವಸ್ಥಾಪಕ ಕತಿರೇಸನ್ ತೇವಾರ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: