ಸುದ್ದಿ ಸಂಕ್ಷಿಪ್ತ

ಸಮರ್ಥ ಭಾರತ ಪರ್ವ ಉತ್ಸವ : ವಿವಿಧ ಸ್ಪರ್ಧೆ – ಅರ್ಜಿ ಆಹ್ವಾನ

ಮೈಸೂರು, ಡಿ. 18 : ವಿವೇಕಾನಂದ ಕೇಂದ್ರ ಕನ್ಯಾಕುಮಾರಿ ಸಂಸ್ಥೆಯು ‘ಸಮರ್ಥ ಭಾರತ ಪರ್ವ’ ಉತ್ಸವದ ಅಂಗವಾಗಿ ಅಂತರ್ಶಾಲ ಮತ್ತು ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯನ್ನು ಡಿ. 25 ರಿಂದ 29ರವರೆಗೆ ಆಯೋಜಿಸಿದೆ.

ಡಿ.25ರಂದು ದೇಶಭಕ್ತಿ ಗೀತೆ, ಡಿ. 26- ಸ್ವಾಮಿ ವಿವೇಕಾನಂದ ಕುರಿತ ಗೀತೆ, ಡಿ.27ಕ್ಕೆ ದೇವರನಾಮ, ಡಿ.28ರಂದು ಜಾನಪದ ಗೀತೆ ಹಾಗೂ ಡಿ.29ರಂದು ಚಿತ್ರಕಲೆ, ರಸಪ್ರಶ್ನೆ ಮತ್ತು ರಂಗೋಲಿ, ಸ್ವಾಮಿ ವಿವೇಕಾನಂದರ ವಿಚಾರಗಳು – ದೇಶಭಕ್ತಿ, ಶಿಕ್ಷಣ, ಚಾರಿತ್ರ್ಯ ನಿರ್ಮಾಣದ ಬಗ್ಗೆ ನುಡಿಮುತ್ತಿನ ಸ್ಪರ್ಧೆಯನ್ನು ಆಯೋಜಿಸಿದೆ.

ಪ್ರತಿದಿನ ಸಂಜೆ 5.30ಕ್ಕೆ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ಆಸಕ್ತರು ಮೊ.ನಂ. 9449488228 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: