ಮೈಸೂರುಸಿಟಿ ವಿಶೇಷ

‘ಮೈಸೂರು ಮಾಗಿ ಉತ್ಸವ 2017’ – ಕಾರ್ಯಕ್ರಮ ವಿವರ

ಮೈಸೂರು (ಡಿ.18): ಮೈಸೂರು ದಸರಾ ವಿಶ್ವ ಮಟ್ಟದಲ್ಲಿ ವಿಶಿಷ್ಟ ಬ್ರಾಂಡ್ ಆಗಿ ರೂಪುಗೊಂಡಿದೆ. ದಸರೆಯಂತೆಯೇ ವಿಶಿಷ್ಟ ರೀತಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತ, ಮೈಸೂರು ಹಾಗೂ ಸಂಬಂಧಿಸಿದ ಭಾಗಿದಾರರ ಸಹಯೋಗದಲ್ಲಿ ಡಿ.23ರಿಂದ ಜ.1ರ ವರೆಗೆ 10 ದಿನಗಳ ಕಾಲ ಮೈಸೂರು ಮಾಗಿ ಉತ್ಸವ (ಮೈಸೂರು ವಿಂಟರ್‍ ಫೆಸ್ಟಿವರ್‍) ಅನ್ನು ಆಯೋಜಿಸಲು ಉದ್ದೇಶಿಸಲಾಗಿದೆ.

ಮೈಸೂರು ದಸರಾ ಮಾದರಿಯಲ್ಲಿಯೇ ಮೈಸೂರು ಮಾಗಿ ಉತ್ಸವವನ್ನು ವಿನೂತನ ಬ್ರಾಂಡ್ ಆಗಿ ಸೃಜಿಸಿ ಮೈಸೂರನ್ನು ವಿಶ್ವ ಪ್ರವಾಸಿ ಭೂಪಟದಲ್ಲಿ ಅಗ್ರ ಸ್ಥಾನಿಯನ್ನಾಗಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ 10 ದಿನಗಳ ಕಾಲ ಈ ಕೆಳಕಂಡ ಪ್ರವಾಸಿ ಚಟುವಟಿಕೆಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ.

ಅರಮನೆ ಆವರಣದಲ್ಲಿ “ಫಲಪುಷ್ಪ ಪ್ರದರ್ಶನ”:

ಮೈಸೂರು ಅರಮನೆ ಮಂಡಳಿಯ ವತಿಯಿಂದ ಡಿ.23 ರಿಂದ ಜ.1 ರವರೆಗೆ ಬೆಳಿಗ್ಗೆ 10.00 ರಿಂದ ರಾತ್ರಿ 9.00 ರವರೆಗೆ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದ ನಿಮಿತ್ತ ಈ ಕೆಳಕಂಡಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

>> ಹಳೆಯ ಮರದ ಅರಮನೆ ಮಾದರಿ 20 ಅಡಿ ಎತ್ತರದ ಅಳತೆಯಲ್ಲಿ, ಸಿಂಹಾಸನ ಅಳತೆ 15 ಅಡಿ ಅಳತೆಯಲ್ಲಿ, ಮಹಾರಾಜರು ಕುಳಿತಿರುವ ಹಾಗೆ ಹಾಗೂ ಮಹಾರಾಜರ 6 ಸೇವಕರನ್ನು ಮಣ್ಣಿನಿಂದ ನಿರ್ಮಿಸಿರುವ ಆಕೃತಿಗಳನ್ನು ಹೂವುಗಳಿಂದ ಅಲಕಂರಿಸುವುದು.

>> ಸುಮಾರು 33 ಜಾತಿಯ 10 ಸಾವಿರ ಗಿಡಗಳನ್ನು ಮಣ್ಣಿನ ಕುಂಡಗಳಲ್ಲಿ ಜೋಡಿಸಿ ಅಲಂಕರಿಸುವುದು.

>> ಆನೆಗಾಡಿ ಮತ್ತು ಆನೆ ಆಕೃತಿಯನ್ನು ಅದರಲ್ಲಿ 4 ಜನ ಸಂಗೀತಗಾರರು ಕುಳಿತು ಸಂಗೀತವನ್ನು ನುಡಿಸುವ ಮಾದರಿಯಲ್ಲಿ ಮಣ್ಣಿನಿಂದ ನಿರ್ಮಿಸಿರುವ ಆಕೃತಿಗಳನ್ನು ಹೂವುಗಳಿಂದ ಅಲಂಕರಿಸುವುದು.

>> 3 ಪ್ರವೇಶ ದ್ವಾರಗಳನ್ನು ಗೋಪುರದ ಮಾದರಿಯಲ್ಲಿ ಆಕೃತಿಯನ್ನು ನಿರ್ಮಿಸಿ ಹೂವುಗಳಿಂದ ಅಲಂಕರಿಸುವುದು.

>> ಫಲಪುಷ್ಪ ಪ್ರದರ್ಶನದ ಅಂಗವಾಗಿ ಮುಖ್ಯ ಅತಿಥಿಗಳಿಗೆ ಹಾಗೂ ಗಣ್ಯರಿಗೆ ಸುಮಾರು 200 ಔಷಧಿಯುಕ್ತ ಗಿಡಗಳನ್ನು ವಿತರಣೆ.

>> ಊಟಿಯಲ್ಲಿ ಬೆಳೆದಂತ ವಿವಿಧ ಜಾತಿಗಳ ಹೂವುಗಳನ್ನು ಬಳಸಿಕೊಂಡು ಕಾರ್ಯಕ್ರಮದಲ್ಲಿ ಅಲಂಕೃತ ಸ್ಟ್ಯಾಂಡ್‍ಗಳಲ್ಲಿ ಬೊಕ್ಕೆ ರೀತಿಯಲ್ಲಿ ಹೂವುಗಳಿಂದ ಅಲಂಕರಿಸುವುದು. (ಕಾರ್ನೆಷನ್, ಲಿಲಿಯಮ್ಸ್ ಹಾಗೂ ಆಸ್ಟ್ರಮೇರಿಯ)

>> ಫಲಪುಷ್ಪ ಪ್ರದರ್ಶನದಲ್ಲಿ ಮಕ್ಕಳ ಆಕರ್ಷಣೆಗಾಗಿ

ಅ) ಕಾಳಿಂಗ ಸರ್ಪ

ಆ) ಆಮೆ

ಇ) ನಕ್ಷತ್ರ ಮೀನು

ಈ) ಆಕ್ಟೋಪಸ್

ಉ) ಜೈ ಹನುಮಾನ್

ಊ) ಸುಖೋಯ್ ಏರ್‍ಕ್ರಾಫ್ಟ್ – 18 ಅಡಿ ಎತ್ತರ

ಛೋಟಾ ಭೀಮ್ ಮತ್ತು ಛೋಟಾ ಕೃಷ್ಣ ಆಕೃತಿಗಳನ್ನು ನಿರ್ಮಿಸಿ ಹೂವು ಮತ್ತು ತರಕಾರಿಗಳಿಂದ ಸಿಂಗಾರಗೊಳಿಸುವುದು.

>> ವರಹಾಸ್ವಾಮಿ ದೇವಸ್ಥಾನದ ಗೋಡೆಗೆ ಹೊಂದಿಕೊಂಡಂತೆ ವರ್ಟಿಕಲ್ ಗಾರ್ಡನ್ ನಿರ್ಮಿಸುವುದು. 10 ಅಡಿ ಎತ್ತರಗಳು ಹಾಗೂ 273 ಅಡಿ ಉದ್ದವಾಗಿರುತ್ತದೆ. ಇದಕ್ಕೆ ಆಕರ್ಷಣೆ ನೀಡಲು ಪಿಟೋನಿಯ ಎಂಬ ಜಾತಿಯ ಕೆಂಪು, ಬಿಳಿ, ಪರ್ಪಲ್ ಹೂವಿನ ಗಿಡ ಹಾಗೂ ಹಸಿರು ಎಲೆಯ ಜಾತಿಯ ಗಿಡಗಳಲ್ಲೂ ಅಲಂಕರಿಸುವುದು.

>> ಫಲಪುಷ್ಪ ಪ್ರದರ್ಶನದಲ್ಲಿ ಆಕರ್ಷಣೆ ನೀಡಲು ವಿವಿಧ ವಿನ್ಯಾಸಗಳನ್ನು ಹೂವುಗಳಿಂದ ಹಾಗೂ ತರಕಾರಿಗಳಿಂದ ಅಲಂಕರಿಸುವುದು. ಫಲಪುಷ್ಪ ಪ್ರದರ್ಶನದ ನಡೆಯುವ 10 ದಿನಗಳ ಅವಧಿಯಲ್ಲಿ ಮಧ್ಯದಲ್ಲಿ ಆಕೃತಿಗಳು ಹಾಗೂ ವಿನ್ಯಾಸಗಳಿಗೆ ಬಳಸಲಾಗಿರುವ ಹೂವುಗಳನ್ನು ಒಂದು ಬಾರಿ ಬದಲಾಯಿಸಿ ತಾಜಾತನವನ್ನು ಕಾಪಾಡಿಕೊಳ್ಳಲಾಗುವುದು. ಅಂದಾಜು 3.5 ಲಕ್ಷ ಹೂವುಗಳಿಂದ ಅಲಂಕರಿಸಲಾಗುವುದು.

>> ಫಲಪುಷ್ಪ ಪ್ರದರ್ಶನ ಅಂಗವಾಗಿ ಸರ್ಕಾರಿ ಹಾಗೂ ಖಾಸಗೀ ಸಂಸ್ಥೆಗಳಿಂದ ಭಾಗವಹಿಸಿ ಹೂವು ಕುಂಡಗಳ ಜೋಡಣೆಗಳನ್ನು ಹಾಗೂ ಆಕೃತಿಗಳನ್ನು ಪ್ರದರ್ಶಿಸುತ್ತಾರೆ.

>> ಬ್ರೇಕ್ಸ್ ಇಂಡಿಯಾ ಲಿಮಿಟೆಡ್, ನಂಜನಗೂಡು ರವರು ನಂಜನಗೂಡು ದೇವಸ್ಥಾನದ ಗೋಪುರದ ಮಾದರಿಯನ್ನು ನಿರ್ಮಿಸಿ ಹೂವುಗಳಿಂದ ಅಲಂಕರಿಸುವುದು.

>> ತೋಟಗಾರಿಕೆ ಇಲಾಖೆ, ಮೈಸೂರು, ಸರ್ಕಾರಿ ಆಯುರ್ವೇಧಿಕ್ ಕಾಲೇಜು, ಮೈಸೂರು, ವೈಷ್ಣವಿ ಲ್ಯಾಂಡ್‍ಸ್ಕೇಪ್, ಬಿಇಎಂಎಲ್, ಮೈಸೂರು, ವಾಕ್ ಶ್ರವಣ ಸಂಸ್ಥೆ, ಮೈಸೂರು, ಗಣಪತಿ ಸಚ್ಚಿದಾನಂದ ಆಶ್ರಮ, ಮೈಸೂರು, ಇಂದಿರಾಗಾಂಧಿ ರಾಷ್ಟ್ರೀಯ ಮ್ಯೂಸಿಯಂ, ಮೈಸೂರು ಹಾಗೂ ಇತರೆ ವ್ಯಕ್ತಿಗಳಿಂದಲೂ ಸಹ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗನ್ನು ನೀಡಲು ಪಾಲ್ಗೊಳ್ಳುತ್ತಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ:

>> ದಿನಾಂಕ : 23-12-2017, ಸಂಜೆ : 7:00 ರಿಂದ 9:00 ರವರೆಗೆ

ಮೈಸೂರು ಮೋಹನ್ ಮತ್ತು ಮೋಹನ್ ವಾದ್ಯವೃಂದದವರಿಂದ “ಸಂಗೀತ ಸಂಭ್ರಮ” – ಶ್ರೀಮತಿ ನಂದಿತಾ, ಶ್ರೀ ದಿವ್ಯ ರಾಘವನ್, ಕು. ಅನುರಾಧ ಭಟ್, ಶ್ರೀ ಅಜಯ್ ವಾರಿಯರ್, ಶ್ರೀ ವ್ಯಾಸರಾಜ್ ಸೋಸಲೆ, ಶ್ರೀ ಚಿನ್ಮಯ ಆತ್ರೆ ಹಾಗೂ ಪ್ರಖ್ಯಾತ ಮ್ಯೂಸಿಷಿಯನ್ಸ್ ತಂಡದಿಂದ”

>> ದಿನಾಂಕ : 24-12-2017, ಸಂಜೆ : 7:00 ರಿಂದ 9:00 ರವರೆಗೆ

ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಗಾಯಕರಾದ ಶ್ರೀ ಹರ್ಷ ಮತ್ತು ತಂಡದವರಿಂದ “ಸರಿಗಮಪ ಸೌರಭ”

>> ದಿನಾಂಕ : 25-12-2017,  ಸಂಜೆ : 7:00 ರಿಂದ 9:00 ರವರೆಗೆ

ಖ್ಯಾತ ಹಿನ್ನೆಲೆ ಗಾಯಕರಾದ ಶ್ರೀ ರಾಜೇಶ್‍ಕೃಷ್ಣನ್ ಮತ್ತು ತಂಡದವರಿಂದ ಸುಮಧುರ ಕನ್ನಡ ಗೀತೆಗಳ “ಸಂಗೀತ ಸಂಜೆ”

>> ದಿನಾಂಕ : 26-12-2017, ಸಂಜೆ : 6:00 ರಿಂದ 7:00 ರವರೆಗೆ

ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಇವರಿಂದ ವಿವಿಧ ಸಂಗೀತ ನೃತ್ಯ ಕಾರ್ಯಕ್ರಮಗಳು

ಸಂಜೆ : 7:00 ರಿಂದ 9:00 ರವರೆಗೆ  ಶ್ರೀಮತಿ ಸುನೀತಾ ಚಂದ್ರಕುಮಾರ್, ರಘುಲೀಲಾ ಸಂಗೀತಾ ಮಂದಿರ, ಇವರಿಂದ “ಗಾನಯಾನ” ಪ್ರಸ್ತುತಿ ವಾರ್ತಾ ಇಲಾಖೆ, ಮೈಸೂರು.

>> ದಿನಾಂಕ : 27-12-2017, ಸಂಜೆ : 7:00 ರಿಂದ 9:00 ರವರೆಗೆ ಶ್ರೀ ಪುತ್ತೂರು ನರಸಿಂಹನಾಯಕ್ ಮತ್ತು ಬಳಗದವರಿಂದ ಭಾವಗೀತೆಗಳು, ವಚನ, ದಾಸರ ಪದಗಳು, ಜಾನಪದ ಗೀತೆಗಳ “ಸುಗಮ ಸಂಗೀತ ಮತ್ತು ಲಘು ಸಂಗೀತ”

>> ದಿನಾಂಕ : 31-12-2017, ಸಂಜೆ : 7:00 ರಿಂದ 9:00 ರವರೆಗೆ ಪೊಲೀಸ್ ಇಲಾಖೆಯ ವತಿಯಿಂದ ಕನ್ನಡ ಮತ್ತು ಆಂಗ್ಲ ಪೊಲೀಸ್ ಬ್ಯಾಂಡ್

ಮೈಸೂರು ಅರಮನೆ ಮಂಡಳಿಯ ವತಿಯಿಂದ “ಹೊಸ ವರ್ಷಾಚರಣೆ”ಯ ಪ್ರಯುಕ್ತ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಪಟಾಕಿ ಸಿಡಿಸುವ ಕಾರ್ಯಕ್ರಮ

>> ದಿನಾಂಕ : 01-01-2018, ಬೆಳಿಗ್ಗೆ : 7:00 ರಿಂದ ರಾತ್ರಿ 9:00 ರವರೆಗೆ

ಫಲಪುಷ್ಪ ಪ್ರದರ್ಶನದೊಂದಿಗೆ ಸಾಯಂಕಾಲ 7:00 ರಿಂದ ರಾತ್ರಿ 9:00 ಗಂಟೆಯವರೆಗೆ ಮತ್ತು ಸಮಾರೋಪ ಸಮಾರಂಭ ಹಾಗೂ ಅರಮನೆ ವಿದ್ಯುತ್ ದೀಪಾಲಂಕಾರ ಇರುತ್ತದೆ.

ಬೊಂಬೆಗಳ ಪ್ರದರ್ಶನ ಕಾರ್ಯಕ್ರಮ:

ಕೃಷ್ಣನ ದಶಾವತಾರಗಳು, ಸತ್ಯಂ ಶಿವಂ ಸುಂದರಂ, ಹಬ್ಬಗಳು, ನವದುರ್ಗೆಯರು, ಸಾಂಸ್ಕøತಿಕ ಗೊಂಬೆಗಳು, ಸಮುದ್ರ ಮಂಥನ ಕುರಿತ ಮಾದರಿಯ ಬೊಂಬೆಗಳನ್ನು ಫಲಪುಷ್ಪ ಪ್ರದರ್ಶನದ ಬೊಂಬೆ ಮನೆಯಲ್ಲಿ ಪ್ರದರ್ಶಿಸಲಾಗುವುದು.

ಮಕ್ಕಳ ಹಬ್ಬ ಕಾರ್ಯಕ್ರಮ

ಮಕ್ಕಳ ಹಬ್ಬದ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಮಕ್ಕಳನ್ನೊಳಗೊಂಡ ಕರಗ, ಕಂಸಾಳೆ, ನಗಾರಿ, ಚಿತ್ರ ಬಿಡಿಸುವುದು, ವೇಷಭೂಷಣ ಸ್ಪರ್ಧೆ, 10 ಜೊತೆ ಮಕ್ಕಳಿಂದ ಕುಸ್ತಿ ಪಂದ್ಯಾವಳಿ, ಚರಕ, ಕುಂಬಾರ ಚಕ್ರ, ಪ್ರಾಣಿ, ಪಕ್ಷಿ, ಚಿಟ್ಟೆಗಳ ಮುಖವಾಡ ತಯಾರಿಕೆ (ಓರಿಗಾಮಿ-ತಿರುಗಾಮಿ), ಮಕ್ಕಳಿಗೆ ಯೋಗಾಸನ ಶಿಬಿರ ಹಾಗೂ ದೇಸಿ ಕ್ರೀಡೆಗಳನ್ನು ಒಳಗೊಂಡ 06 ಮಳಿಗೆಗಳನ್ನು 03 ದಿನಗಳಿಗೆ ನಿರ್ಮಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಹಾಗೂ ವಿಶೇಷ ಚೇತನ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಛಾಯಾಚಿತ್ರ ಪ್ರದರ್ಶನ :

ಮೈಸೂರು ಅರಮನೆ ಆವರಣದಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನದಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.ಹಾಗೆಯೇ,ಪುರಾತತ್ವ ಸಂಗ್ರಹಾಲಯಗಳ ಇಲಾಖಾ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ಛಾಯಾಚಿತ್ರಗಳ ಹಾಗೂ ಐತಿಹಾಸಿಕ ದಾಖಲೆಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಸೈಕಲ್ ಸವಾರಿ-ಪರಂಪರೆ: ದಿನಾಂಕ:26, 27, 28 ಡಿಸೆಂಬರ್

ಪುರಾತತ್ವ,ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಪಾರಂಪರಿಕ ಸೈಕಲ್ ಸವಾರಿಯನ್ನು ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಆಯೋಜಿಸಲಾಗಿದೆ.

1.ರಂಗಚಾರ್ಲು ಹಾಲ್ 2.ಸಿಲ್ವರ್ ಜ್ಯೂಬಿಲಿ ಕ್ಲಾಕ್ ಟವರ್ 3.ಚಾಮರಾಜ ಒಡೆಯರ್ ವೃತ್ತ 4.ಅಂಬಾ ವಿಲಾಸ ಅರಮನೆ 5.ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ 6.ಲ್ಯಾನ್ಸ್ ಡೌನ್ ಕಟ್ಟಡ 7.ಜಗನ್‍ಮೋಹನ ಅರಮನೆ 8.ವಿವೇಕ ಸ್ಮಾರಕ 9. ಓರಿಯಂಟಲ್ ಸಂಶೋಧನಾ ಕೇಂದ್ರ 10.ಕ್ರಾಫರ್ಡ್ ಭವನ 11.ಜಿಲ್ಲಾಧಿಕಾರಿಗಳ ಕಛೇರಿ 12.ಮಟ್ರೋಪೋಲ್ ಮತ್ತು ಹೋಟೆಲ್ ಮಯೂರ 13.ರೈಲ್ವೆ ನಿಲ್ದಾಣ 14.ಮೈಸೂರು ಮೆಡಿಕಲ್ ಕಾಲೇಜು.

ಆಸಕ್ತರು ಸಂಪರ್ಕಿಸಬೇಕಾದ ಸಂಖ್ಯೆಗಳು: 0821-2424671, ಎನ್ ಎಲ್ ಗೌಡ-8105001151

ಜನಪ್ರಿಯ ಮಾಗಿ ಆಹಾರ ಹಾಗೂ ಕೇಕ್ ಉತ್ಸವ: 27, 28, 29 ಡಿಸೆಂಬರ್

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವತಿಯಿಂದ ನಂಜರಾಜ ಬಹದ್ದೂರ್ ಛತ್ರದಲ್ಲಿ 3 ದಿನಗಳ ಕಾಲ ಜನಪ್ರಿಯ ಮಾಗಿ ಆಹಾರ ಹಾಗೂ ಕೇಕ್ ಉತ್ಸವವನ್ನು ಆಯೋಜಿಸಲಾಗಿದೆ. 27ನೇ ತಾರೀಖು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆ ಮಾಡಲಾಗುವುದು.ಆಸಕ್ತರಿಗಾಗಿ ವಿವಿಧ ಸ್ಪರ್ಧೆ ಗಳನ್ನು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಓಪನ್ ಸ್ಟ್ರೀಟ್ ಫೆಸ್ಟಿವಲ್: ಡಿಸೆಂಬರ್ 30

ಪ್ರವಾಸೋದ್ಯಮ ಇಲಾಖಾ ವತಿಯಿಂದ ಡಿ ದೇವರಾಜು ಅರಸ್ ರಸ್ತೆಯಲ್ಲಿ ಡಿಸೆಂಬರ್ 30 ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 7.30ರವರೆಗೆ ಈ ಉತ್ಸವವನ್ನು ಆಯೋಜಿಸಲಾಗಿದೆ. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ವರ್ಕ್ ಶಾಪ್‍ಗಳನ್ನು ಹಾಗೂ ವಸ್ತು ಪ್ರದರ್ಶನವನ್ನು ಆಯೋಜಿಸಲಾಗುವುದು.

ಅಂದಾಜು 80 ಮಳಿಗೆಗಳನ್ನು ತೆರೆಯಲಾಗುವುದು. 25ಕ್ಕೂ ಹೆಚ್ಚು ಕಲಾತಂಡಗಳು ಬೆಳಿಗ್ಗೆಯಿಂದ ಸಂಜೆವರೆಗೂ ಪ್ರದರ್ಶನ ನೀಡಲಿದ್ದಾರೆ. ಆಹಾರ ಮಳಿಗೆಗಳು ಹಾಗೂ ಫುಡ್ ಟ್ರಕ್‍ಗಳು ಭಾಗವಹಿಸಲಿವೆ.ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಆಕರ್ಷಣೀಯ ಕಾರ್ಯಕ್ರಮ ರೂಪಿಸಲು ಉದ್ದೇಶಿಸಲಾಗಿದೆ.

ಚಲನ ಚಿತ್ರೋತ್ಸವ:

ವಾರ್ತಾ ಇಲಾಖಾ ವತಿಯಿಂದ 3 ದಿನಗಳ ಕಾಲ ಕಲಾಮಂದಿರದಲ್ಲಿ ಚಲನ ಚಿತ್ರೋತ್ಸವವನ್ನು ಆಯೋಜಿಸಲಾಗುವುದು. ದಿನಾಂಕ ಹಾಗೂ ಪ್ರದರ್ಶಿಸುವ ಚಲನಚಿತ್ರಗಳ ವಿವರ ನೀಡಲಾಗುವುದು.

ಸಂಗೀತ ಕಾರಂಜಿ:

ತೋಟಗಾರಿಕಾ ಇಲಾಖಾ ವತಿಯಿಂದ ದಿನಾಂಕ 23.12.2017ರಿಂದ 01.01.2018ರವರೆಗೆ ಸಂಗೀತ ಕಾರಂಜಿಯನ್ನು ಪ್ರತಿನಿತ್ಯ ಸಂಜೆ 7 ಗಂಟೆಯಿಂದ 8.30 ರವರೆಗೆ ಆಯೋಜನೆ ಮಾಡಲಾಗುವುದು.

(ಎನ್‍ಬಿಎನ್‍)

Leave a Reply

comments

Related Articles

error: