ಮೈಸೂರು

ಅಕ್ರಮವಾಗಿ ಜೂಜಾಡುತ್ತಿದ್ದ ಮೂವರ ಬಂಧನ : 31,150 ರೂ.ನಗದು ವಶ

ಮೈಸೂರು,ಡಿ.19:- ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಮೈಸೂರು ನಗರ ಸಿ.ಸಿ.ಬಿ. ಮತ್ತು ವಿಜಯನಗರ ಪೊಲೀಸರು ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ಮೂವರನ್ನು ಬಂಧಿಸಿ ನಗದನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕುವೆಂಪುನಗರದ ಸುಬ್ಬಣ್ಣ ಬಿನ್ ಲೇ:ನಾರಾಯಣ, (45),  ಕೆ.ಆರ್.ಮೊಹಲ್ಲಾದ ಸುಧೀರ್ ಬಿನ್ ಪ್ರಸನ್ನ, (39), ಚಾಮರಾಜನಗರ ಟೌನ್ ನ ಜ್ಞಾನೇಶ್ ಬಿನ್ ಜವರಪ್ಪ, (41)  ಎಂದು ಗುರುತಿಸಲಾಗಿದೆ. ಇವರು ಡಿ.17ರಂದು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸೂರು ರಸ್ತೆಯಲ್ಲಿರುವ ರುಚಿ ದಿ ಪ್ರಿನ್ಸ್ ಹೋಟೆಲ್‍ನ 1ನೇ ಮಹಡಿಯ ರೂಂ ನಂ:514ರಲ್ಲಿ  ಜೂಜಾಟವಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಜೂಜಾಟಕ್ಕೆ ಪಣವಾಗಿಟ್ಟಿದ್ದ 31,150ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಡಾ. ವಿಕ್ರಂ ಅಮಟೆ ವಿ ವಿಕ್ರಮ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಎ.ಸಿ.ಪಿ. ಸಿ.ಗೋಪಾಲ್‍ರವರ ನೇತೃತ್ವದಲ್ಲಿ ಸಿ.ಸಿ.ಬಿ. ಘಟಕದ ಪೊಲೀಸ್ ಇನ್ಸಪೆಕ್ಟರ್ ಕೃಷ್ಣಪ್ಪ, ಎನ್.ಜಿ. , ವಿಜಯನಗರ ಪೊಲೀಸ್ ಠಾಣಾ ಪಿ.ಎಸ್.ಐ., ರಾಮಚಂದ್ರ ಎನ್, ಸಿ.ಸಿ.ಬಿ.ಯ ಎ.ಎಸ್.ಐ. ಎಲ್.ಸುಭಾಷ್‍ಚಂದ್ರ, ಸಿಬ್ಬಂದಿಗಳಾದ ರವಿಕುಮಾರ್, ನಿರಂಜನ್ ಮತ್ತು ರಾಜೇಶ್‍ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: