ಸುದ್ದಿ ಸಂಕ್ಷಿಪ್ತ

ವಿಜ್ಞಾನ ತಾಂತ್ರಿಕ ಅಧಿವೇಶನ

ಮೈಸೂರು ಡಿ.19:- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ವತಿಯಿಂದ “ಮಾನವ ಕುಲದ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬ ಕೇಂದ್ರ ವಿಷಯದಡಿ ರೇವಾ ವಿಶ್ವವಿದ್ಯಾನಿಲಯ, ಬೆಂಗಳೂರು ಇವರ ಸಹಯೋಗದೊಂದಿಗೆ 2018 ರ ಜನವರಿ 18 ಮತ್ತು 19(ಗುರುವಾರ ಮತ್ತು ಶುಕ್ರವಾರ) ಎರಡು ದಿನ ತಾಂತ್ರಿಕ ಅಧಿವೇಶನದಲ್ಲಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಖ್ಯಾತ ವಿಜ್ಞಾನಿಗಳಿಂದ ಮತ್ತು ಸಂಶೋಧಕರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಭೌತ ಮತ್ತು  ಗಣಿತ ವಿಜ್ಞಾನ, ರಸಾಯನ ಮತ್ತು ಜೀವ ವಿಜ್ಞಾನ, ಇಂಜಿನಿಯರಿಂಗ್ ಹಾಗೂ ಅಂತರ್  ರಾಷ್ಟ್ರೀಯ ವಿಜ್ಞಾನಗಳಿಗೆ ಸಂಬಂಧಿಸಿದ ವೈಜ್ಞಾನಿಕ ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತ ಪಡಿಸಲು ಅವಕಾಶ ಕಲ್ಪಿಸಲಾಗಿದೆ. ತಜ್ಞರ ಸಮಿತಿ ಆಯ್ಕೆ ಮಾಡಿದ ಪ್ರತಿ ವಿಷಯದ 4 ಅತ್ಯುತ್ತಮ ಪ್ರಾತ್ಯಕ್ಷಿಕೆಗಳಿಗೆ ಬಹುಮಾನ ನೀಡಲಾಗುವುದು.
ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ನೊಂದಾಯಿಸಿಕೊಳ್ಳಲು ಹಾಗೂ ಸಂಶೋಧನಾ ಪ್ರಸ್ತುತಿ ಸಾರಾಂಶವನ್ನು ಕಳುಹಿಸಲು 2018ರ ಜನವರಿ 5 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಅಕಾಡೆಮಿ ಸಮ್ಮೇಳನದ ವೆಬ್ ತಾಣದಲ್ಲಿ www.kstaconference.com  ಹಾಗೂ ಡಾ.ಎ.ಎಂ.ರಮೇಶ್, ಹಿರಿಯ ವೈಜ್ಞಾಧಿಕಾರಿಯನ್ನು( 9845258894 ) ಸಂಪರ್ಕಿಸುವಂತೆ ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: