ಕರ್ನಾಟಕ

ಆಲಮೇಲ ಪಟ್ಟಣದಲ್ಲಿ ಒಡೆದ ಕಾಲುವೆ: ನಗರ ಸಂಪೂರ್ಣ ಜಲಾವೃತ

ವಿಜಯಪುರ,ಡಿ.19-ಕಾಲುವೆ ಒಡೆದು ಪಟ್ಟಣಕ್ಕೆ ನೀರು ನುಗ್ಗಿರುವ ಘಟನೆ ಮಂಗಳವಾರ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ನಡೆದಿದೆ.

ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೃಷ್ಣಭಾಗ್ಯ ಜಲ ನಿಗಮದ 16ನೇ ವಿತರಣಾ ಯೋಜನೆಯಲ್ಲಿ ಕಾಲುವೆ ಒಡೆದು ಅವಾಂತರ ಸೃಷ್ಟಿಸಿದ್ದಾರೆ. ಬಸವ ನಗರದಲ್ಲಿರುವ ಮನೆಗಳ ಕಾಂಪೌಂಡ್ ಹಾಗೂ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ.

ರಸ್ತೆ ಸಂಪೂರ್ಣ ಜಲಾವೃತವಾಗಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದ್ದು, ರಸ್ತೆಯಲ್ಲಿ ಸಂಚರಿಸುವವರು ಪರದಾಡುವಂತಾಗಿದೆ. ಕಳೆದ ಮೂರು ವರ್ಷಗಳ ಹಿಂದೆಯೇ ಕಾಲುವೆ ಒಡೆದಿದೆ. ಪ್ರತಿ ಬಾರಿ ಕಾಲುವೆಗೆ ನೀರು ಹರಿಸಿದಾಗಲೆಲ್ಲ ಬಸವನಗರ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ಕುರಿತು ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: