ಮೈಸೂರು

ಡಿ. 21ರಂದು ಜಿಎಸ್ ಟಿ ಪ್ರಾತ್ಯಕ್ಷಿಕೆ

ಮೈಸೂರು,ಡಿ.19 – ಭವಾನಿ ಅಸೋಸಿಯೇಟ್ಸ್ ವತಿಯಿಂದ  ಡಿ.21 ರಂದು ಬೆಳಿಗ್ಗೆ 10ಕ್ಕೆ ಜೆಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಜಿಎಸ್ ಟಿ ಸಂಯೋಜಿತ ಯೋಜನೆ ಮತ್ತು ವಿವರ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಸ್ಥ ಎನ್.ಡಿ.ಶ್ರೀನಿವಾಸ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಾಗಾರವು ಹೋಟೆಲ್, ರೆಸ್ಟೋರೆಂಟ್, ಗುತ್ತಿಗೆದಾರರು, ವ್ಯಾಪಾರಸ್ಥರು, ಉತ್ಪಾದನಾ ಘಟಕದವರು, ಲೆಕ್ಕ ಪರಿಶೋಧಕರು ಹಾಗೂ ಸಂಯೋಜಿತ ಯೋಜನೆಗೆ ಒಳಗೊಂಡವರಿಗೆ ಉಪಯುಕ್ತವಾಗಿರುತ್ತದೆ ಎಂದು ಹೇಳಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್  ಅನ್ನಪೂರ್ಣ ಶ್ರೀಕಾಂತ್, ಕೆ.ವಿ.ವಿನಯ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಂದೀಪ್ ಸಾಗರ್, ದೇವರಾಜ್, ಅಂಬಿಕ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: