ದೇಶಪ್ರಮುಖ ಸುದ್ದಿವಿದೇಶ

ನಕಲಿ ದಾಖಲೆ ನೀಡಿ ಆಧಾರ್ ಕಾರ್ಡ್ ಪಡೆಡಿದ್ದ 6 ಮಂದಿ ಬಾಂಗ್ಲಾದೇಶಿ ನಾಗರಿಕರ ಬಂಧನ

ಬೆಂಗಳೂರು (ಡಿ.19): ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಧಾರ್ ಕಾರ್ಡ್ ಕೂಡ ಪಡೆದುಕೊಂಡಿದ್ದ 6 ಮಂದಿ ಬಾಂಗ್ಲಾದೇಶಿ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ.

ಇವರ ಜೊತೆಗೆ ಆಧಾರ್ ಕಾರ್ಡ್ ಪಡೆಯಲು ಸಹರಿಸಿದ್ದ ಅರೋಪದ ಮೇಲೆ ಒಬ್ಬ ವೈದ್ಯನನ್ನೂ ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಾಂಗ್ಲಾ ಪ್ರಜೆಗಳಾದ ರೂಬಿವುಲ್ಲಾ (23), ರಿಯಾದ್ ಖಾನ್ (25), ಮೊಹಮ್ಮದ್ ಖೋಖೊನ್ (20), ಓಹಿದುಲ್ಲಾ (29), ಮೊಹಮ್ಮದ್ ಕಲಾಂ (34), ಜಾಕೀರ್ ಹುಸೈನ್ (28) ಹಾಗೂ ಇವರುಗಳು ನೀಡುವ ಹಣದಾಸೆಗೆ ಬಿದ್ದು, ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದ ಪ್ರಮುಖ ಆರೋಪಿ ಬಿಟಿಎಂ ಲೇಔಟ್ ನಿವಾಸಿ ಸೈಯದ್ ಸೈಫುಲ್ಲಾ (38) ಬಂಧಿತರು. ಆರೋಪಿಗಳಿಂದ ಆಧಾರ್ ಕಾರ್ಡ್‍ಗಳು ಹಾಗೂ ನಕಲಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಇಷ್ಟೇ ಅಲ್ಲದೆ ಆಧಾರ್ ಕಾರ್ಡ್ ಪಡೆಯಲು ಸಹಕರಿಸಿದ್ದ ಆರೋಪದ ಮೇಲೆ ದೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಚ್.ಸಿ.ಲೋಕೇಶ್ ಅವರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರ ವಿರುದ್ಧ ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸುವುದು, ನಕಲಿ ದಾಖಲೆ ಸೃಷ್ಟಿ, ವಂಚನೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: