ಮೈಸೂರು

ಡಿ.21-22ರಂದು ಪೋರೆನ್ಸಿಕ್ ವಸ್ತು ಪ್ರದರ್ಶನ

ಮೈಸೂರು, ಡಿ. 19 :  ಜೆಎಸ್‌ಎಸ್  ವೈದ್ಯಕೀಯ ಮಹಾವಿದ್ಯಾಲಯದ ಅಂಗಸಂಸ್ಥೆ ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾನಿಲಯ ಪೋರೆನ್ಸಿಕ್ (ವಿಧಿ ವಿಜ್ಞಾನ) ವಸ್ತು ಪ್ರದರ್ಶನವನ್ನು  ಡಿ.21 ಮತ್ತು 22 ರಂದು ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 5ರವರೆಗೆ ಆಯೋಜಿಸಲಾಗಿದೆ ಎಂದು ನ್ಯಾಯವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಚಂದ್ರಕಾಂತ್ ಎಚ್.ವಿ ತಿಳಿಸಿದರು

ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,  ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸಿಟಿ ಪೊಲೀಸ್, ಮೈಸೂರು ವಿಶ್ವವಿದ್ಯಾನಿಲಯದ ಅಪರಾಧಶಾಸ್ತ್ರ ವಿಭಾಗ, ಸಿ.ಎಫ್.ಟಿ.ಆರ್.ಐ, ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯ, ಹಾಗೂ ಜೆಎಸ್‌ಎಸ್ ಆಸ್ಪತ್ರೆ ಕ್ಲಿನಿಕಲ್ ಫಾರ್ಮಸಿ ವಿಭಾಗದ ಸಹಯೋಗದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು, ಸಾರ್ವಜನಿಕರಿಗೆ ಅಪರಾಧ ಮತ್ತು ಅದರ ತನಿಖೆಯ ಬಗ್ಗೆ ದಿನನಿತ್ಯದ ಸಾಧಕ ಬಾದಕಗಳ ವಿಷಯಗಳ ಬಗ್ಗೆ ವಿವರಿಸಲಾಗುತ್ತದೆ. ಅಪರಾಧಕ್ಕೆ ಸಂಬಂಧಪಟ್ಟ ರಸ್ತೆ ಸಂಚಾರಿ ನಿಯಮಗಳು, ರಸ್ತೆ ಅಪಘಾತಗಳು, ಮದ್ದುಗುಂಡುಗಳು, ದಂತ ಸಾಕ್ಷಾಧಾರ, ಅಪರಾಧ ಸ್ಥಳದ ಪರೀಕ್ಷೆ, ಬೆರಳಚ್ಚು ಮತ್ತು ಹಸ್ತಾಕ್ಷರ ವಿಶ್ಲೇಷಣೆ, ವಿಷ ವಿಜ್ಞಾನ ಹಾಗೂ ಕಲಬೆರಕೆ ಆಹಾರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪ್ರಾಧ್ಯಾಪಕ ಡಾ.ಅರುಣ್.ಎಂ  ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: