ಮೈಸೂರು

ಸಂಶೋಧನೆಯ ಪ್ರವೃತ್ತಿ ಬದಲಾಗಬೇಕು : ಕವಿತಾ ರೈ

ಸಂಶೋಧನ ವಿದ್ಯಾರ್ಥಿಗಳಿಗೆ ಮುಕ್ತವಾದ ವಾತಾವರಣವಿರಬೇಕು. ಹಾಗಿಲ್ಲದ ಪರಿಣಾಮ ನಿರಾಶಾವಾದ ಮತ್ತು ಸಂದರ್ಭಗಳಿಂದಾಗಿ ಸಂಶೋಧನೆಯ ಒಟ್ಟು ಪ್ರಕ್ರಿಯೆ ದಾರಿ ತಪ್ಪುತ್ತಿದೆ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಕವಿತಾ ರೈ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘವು ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ 2014-16ನೇ ಸಾಲಿನ ಕಾರ್ಯಚಟುವಟಿಕೆಗಳ ಸಮಾರೋಪ ಹಾಗೂ ಸಂಶೋಧನ ಯಾನ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಂಶೋಧನೆಯ ಪ್ರವೃತ್ತಿ ಬದಲಾಗಬೇಕು. ನಮ್ಮ ಹಿರಿಯ ಜಾನಪದ ಸಂಶೋಧಕರು ಹೊಸ ಸಾಧ್ಯತೆಗಳನ್ನು ಹುಡುಕಿ ಜಾನಪದ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮಾಡಿದ ಹಾಗೇ ಹೊಸ ಅನ್ವೇಷಣೆಗೆ ಹೊಸ ಸಾಧ್ಯತೆಗಳಿಗೆ ವಿದ್ಯಾರ್ಥಿಗಳನ್ನು ತೊಡಗಿಸಬೇಕಿದೆ ಎಂದರು.

ಸಂಶೋಧನೆಗೆಂದು ಪಡೆಯುವ ವಿದ್ಯಾರ್ಥಿ ವೇತನವನ್ನು ಬಡ್ಡಿ ವ್ಯವಹಾರವನ್ನಾಗಿ ಮಾಡುವ ವಿದ್ಯಾರ್ಥಿಗಳಿದ್ದಾರೆ. ಇದರ ಪರಿಣಾಮ ವಿದ್ಯಾರ್ಥಿಗಳಿಗೆ ಸಿಗಬೇಕಾದ ನ್ಯಾಯೋಚಿತ ಸ್ಥಾನ ಮಾನ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಂಶೋಧಕರು ಸಂಶೋದನೆ ಮಾಡುವ ವಾತಾವರಣ ಕಲುಷಿತಗೊಂಡಿದೆ. ವಿಶ್ವವಿದ್ಯಾನಿಲಯಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಪಿ.ವೆಂಕಟರಾಮಯ್ಯ, ಪಾಲಿಕೆ ಸದಸ್ಯ ಪುರುಷೋತ್ತಮ್, ಡಾ.ಶಿವಚಿತ್ತಪ್ಪ, ಹಿರಿತೆರೆ-ಕಿರುತೆರೆ ನಟ ಮಂಡ್ಯರಮೇಶ್, ಡಾ.ಎಂ.ರುದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: