ಮೈಸೂರು

ಲವ್ ಜಿಹಾದ್ ನಡೆದಿದೆ ಎನ್ನಲಾದ ಪ್ರಕರಣಕ್ಕೆ ತಿರುವು : ಪೋಷಕರ ವಿರುದ್ಧವೇ ತಿರುಗಿ ಬಿದ್ದ ಯುವತಿ

ಮೈಸೂರು,ಡಿ.19:- ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಲವ್ ಜಿಹಾದ್ ಪ್ರಕರಣಕ್ಕೆ ಇದೀಗ ತಿರುವು  ದೊರಕಿದ್ದು,  ಯುವತಿ ಪೋಷಕರ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ.

ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಶಿವಮೊಗ್ಗದ ಯುವತಿ ಅನುಷಾ ಹೆಗಡೆ, ನಾನು ಯಾರ ಒತ್ತಡದಿಂದಲೂ ಜಾವಿದ್ ನನ್ನು ಮದುವೆಯಾಗಿಲ್ಲ. ಇದು ಲವ್ ಜಿಹಾದ್ ಕೂಡ ಅಲ್ಲ, ನಮ್ಮದು ಪ್ರೇಮ ವಿವಾಹ ಎಂದಿದ್ದಾರೆ. ನನಗೆ ತಂದೆ ತಾಯಿ ಮುಖ ನೋಡಲೂ ಇಷ್ಟವಿಲ್ಲ. ನನ್ನ ಪಾಲಿಗೆ ಅವರು ಸತ್ತು ಹೋಗಿದ್ದಾರೆ. ಜಾವಿದ್ ಎರಡು ಮದುವೆ ಆಗಿರುವುದು ನನಗೆ ಮೊದಲೇ ಗೊತ್ತಿದ್ದೇ ನಾನು ಮದುವೆ ಆಗಿದ್ದೇನೆ. ಅಸಲಿಗೇ ನಾನೇ ಆತನಿಗೆ ದುಂಬಾಲು ಬಿದ್ದು ಮದುವೆಯಾಗಿದ್ದು, ನನ್ನ ಪೋಷಕರೇ ಕಿರುಕುಳ ನೀಡುತ್ತಿದ್ದಾರೆ ಎಂದು ತಿರುಗಿ ಬಿದ್ದಿದ್ದಾಳೆ. ಅಲ್ಲದೆ ಅವರು ನನಗೆ ಗೊತ್ತಿಲ್ಲದೇ ಅಬಾರ್ಷನ್ ಮಾಡಿಸಿದ್ದು, ಈ ಕುರಿತು ಕೂಡ ಅವರಿಗೆ ಏನು ಮಾಡಬೇಕು ಎಂಬುದನ್ನು ನಾನು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: