ಮೈಸೂರು

ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ಸದಸ್ಯೆ ಶ್ವೇತ ಪ್ರಸಾದ್ ಮಡಪ್ಪಾಡಿ ಅವರಿಗೆ ಸನ್ಮಾನ

ಮೈಸೂರು,ಡಿ.20-ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಗೆ ಸದಸ್ಯರಾಗಿ ನೇಮಕಗೊಂಡಿರುವ ಶ್ವೇತ ಪ್ರಸಾದ್ ಮಡಪ್ಪಾಡಿ ಅವರನ್ನು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ವೇತ ಪ್ರಸಾದ್ ಮಡಪ್ಪಾಡಿ ಅವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬ್ರಾಹ್ಮಣ ಹಿರಿಯ ಮುಖಂಡ ಕೆ.ರಘುರಾಂ ವಾಜಪೇಯಿ, ಅರೆಭಾಷೆ  ಸಾಹಿತ್ಯ ಲೋಕಕ್ಕೆ ಹೆಚ್ಚು ಕೊಡುಗೆ ನೀಡಿದೆ. ಯುವ ಪೀಳಿಗೆ ಅರೆಭಾಷೆಯನ್ನು ಮತ್ತಷ್ಟು ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಮುಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಪಾರ್ಥ ಸಾರಥಿ, ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಉಪಾಧ್ಯಕ್ಷ ಹೆಚ್.ಎನ್.ಶ್ರೀಧರಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಎನ್.ವಿ ಪಣೀಶ್, ಎಚ್.ಜಿ.ಗಿರಿಧರ್, ಜಯಸಿಂಹ, ಸಿಮೆಂಟ್ ರಮೇಶ್, ಶ್ರೀಧರ್, ಕಡಕೊಳ ಜಗದೀಶ್, ರಂಗನಾಥ್ ಸುಬ್ಬರಾವ್, ನಿಶಾಂತ್, ಸ.ವಿನಯ್ ಕಣಗಾಲ್, ಕೌಂಡಿನ್ಯ, ಸೌಭಾಗ್ಯ, ಲಕ್ಷ್ಮಿ, ಸುಜಾತ ರಾವ್, ಜ್ಯೋತಿ, ಭಾಗ್ಯಮ್ಮ ಉಪಸ್ಥಿತರಿದ್ದರು.(ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: