
ಮೈಸೂರು
7.20 ಕೋಟಿ ರೂ. ವೆಚ್ಚದ ಮನೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಂ.ಕೆ.ಸೋಮಶೇಖರ್
ಮೈಸೂರು,ಡಿ.20-ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.2ರ ವ್ಯಾಪ್ತಿಯ ಸುಣ್ಣದಕೇರಿಯ ನಾರಯಣ ಶಾಸ್ತ್ರಿರಸ್ತೆಯ ಶ್ರೀ ಮಲೈಮಹದೇಶ್ವರ ಸ್ವಾಮಿ ದೇವಸ್ಥಾನದ ಬಳಿ ಬುಧವಾರ ಸುಮಾರು 7.20 ಕೋಟಿ ರೂ. ವೆಚ್ಚದ ಮನೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಕೆ.ಸೋಮಶೇಖರ್ ಗುದ್ದಲಿ ಪೂಜೆ ನೆರವೇರಿಸಿದರು.
ಪಿಎಂಇಆರ್ ವೈ, ಕರ್ನಾಟಕ ಸರ್ಕಾರದ ವಸತಿ ಇಲಾಖೆ, ಸ್ಲಂ ಬೋರ್ಡ್ ಇವುಗಳ ಆಶ್ರಯದಲ್ಲಿ ಸುಮಾರು 150 ಮನೆಗಳು ಮಂಜೂರಾಗಿದ್ದು, ಮನೆ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಲೋಕೇಶ್ ಪಿಯಾ, ನಾಸೀರ್, ಕೃಷ್ಣಪ್ಪ, ಹರೀಶ್, ಮಹಮದ್, ವಿಶ್ವನಾಥ್ ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)