ಮೈಸೂರು

ವಿದ್ಯಾರ್ಜನೆಗೆ ಹೆಚ್ಚು ಗಮನ ಹರಿಸಿದಲ್ಲಿ ಯಶಸ್ಸು ಶತಸಿದ್ಧ : ರಶ್ಮಿಕೋಟಿ

ಮೈಸೂರು, ಡಿ. 20:- ವಿದ್ಯಾರ್ಜನೆಗೆ ಹೆಚ್ಚು ಗಮನ ಹರಿಸಿದಲ್ಲಿ ಯಶಸ್ಸು ಶತಸಿದ್ಧ ಎಂದು ಪತ್ರಕರ್ತ  ದಿ. ರಾಜಶೇಖರ್ ಕೋಟಿ ಪುತ್ರಿ ರಶ್ಮಿಕೋಟಿ ಅಭಿಪ್ರಾಯಪಟ್ಟರು.

ಬುಧವಾರ ಎನ್, ಎಸ್ ರಸ್ತೆಯಲ್ಲಿರುವ ಎನ್.ಟಿ.ಎಂ. ಶಾಲಾ ಆವರಣದಲ್ಲಿ ಮೈಸೂರು ಕನ್ನಡ ವೇದಿಕೆ ಮತ್ತು ಎನ್.ಟಿ.ಎಂ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ರಾಜಶೇಖರ ಕೋಟಿ ಅವರ ಸ್ವರಣಾರ್ಥ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ದಿ. ಕೋಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಯಾವುದೇ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದನ್ನು ಎಂದಿಗೂ ಮರೆಯಬಾರದು ಒಂದು ವೇಳೆ ವಿದ್ಯಾಭ್ಯಾಸ ಕೊಡಿಸದಿದ್ದಲ್ಲಿ ಅಂತಹ ಪೋಷಕರಿಗೆ ಮಕ್ಕಳೇ ಶತ್ರುಗಳಾಗುತ್ತಾರೆ ಎಂದರು. ಮಕ್ಕಳು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಶಾಲೆಯ ಶಿಕ್ಷಕರುಗಳು ಶಿಕ್ಷಕರು ನೀಡುವ ಸಲಹೆ ಹಾಗೂ ಮಾರ್ಗದರ್ಶಗಳಂತೆ ನಡೆದುಕೊಂಡಲ್ಲಿ ಅವರು ದೇಶದ ಸತ್ಪ್ರಜೆಗಳಾಗಿರುತ್ತಾರೆ. ಅದರಿಂದ ನೀವುಗಳು ಹೆಚ್ಚಿನ ಆಸಕ್ತಿ ವಹಿಸಿ ವಿದ್ಯಾರ್ಜನೆ ಮಾಡಿದಲ್ಲಿ ನಿಮಗೆ ಯಶಸ್ಸು ಕಟ್ಟಿಟ್ಟು ಬುತ್ತಿ ಹಾಗೇ ನೀವು ಕೋಟಿ ಅವರಿಗೆ ನಿಜವಾದ ಶ್ರದ್ಧಾಜಲಿ ಅರ್ಪಿಸದಂತಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕೋಟಿ ಯವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಬ್ಯಾಂಕ್ ಪುಟ್ಟಸ್ವಾಮಿ, ಸಾಹಿತಿ ಬನ್ನೂರು ಕೆ. ರಾಜು, ಸಮಾಜ ಸೇವಕ ಎಸ್, ಎನ್, ಶಿವಪ್ರಕಾಶ್, ದೇವರಾಜ ಪೋಲಿಸ್ ಠಾಣಾಧಿಕಾರಿ ತಿಮ್ಮರಾಜು, ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: