ಕರ್ನಾಟಕ

ಸದಸ್ಯೆ ಯಶೋಧಮ್ಮ ಇನ್ನೂರರಿಂದ ಮುನ್ನೂರು ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಟ್ಟಿರುವುದು ಸತ್ಯಕ್ಕೆ ದೂರವಾದ ಮಾತು

ರಾಜ್ಯ(ಚಾಮರಾಜನಗರ)ಡಿ.20:- ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯೆ ಯಶೋಧಮ್ಮ ನಮ್ಮ ಮಧುವನಹಳ್ಳಿ ಗ್ರಾಮಕ್ಕೆ ಇನ್ನೂರರಿಂದ ಮುನ್ನೂರು ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೇನೆಂದು ಸುಳ್ಳು ಹೇಳಿ ಚಾಮರಾಜನಗರ ಜಿಲ್ಲಾ ಪತ್ರಿಕೆಗಳಲ್ಲಿ ವರದಿ ಕೊಟ್ಟು ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ ಇದು ಸತ್ಯಕ್ಕೆ ದೂರವಾದ ಮಾತು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಯಾಣಮ್ಮ ಆರೋಪಿಸಿದರು.

ಕೊಳ್ಳೇಗಾಲ ಪಟ್ಟಣದ ವಸತಿಗೃಹದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ಮಧುವನಹಳ್ಳಿ ಗ್ರಾಮಕ್ಕೆ ಕೇವಲ ಐವತ್ತರಿಂದ ಐವತ್ತೈದು ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದಾರೆ ಆದರೆ ಇವರು ಮುನ್ನೂರು ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದೇನೆಂದು ಎಲ್ಲಾಕಡೆ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಇದು ಸರಿಯಲ್ಲ ಎಂದರು. ಐವತ್ತೈದು ಶೌಚಾಲಯಗಳನ್ನು ಮಾಡಿಕೊಟ್ಟಿದ್ದಾರೆ ಆದರೆ ಒಂದು ಶೌಚಾಲಯಕ್ಕೆ 10ಸಾವಿರ ಖರ್ಚಾಗಿದೆ. ಯಶೋಧಮ್ಮ 12ಸಾವಿರ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಲ್ ಪಾವತಿ ಮಾಡಿಕೊಂಡಿದ್ದಾರೆ ಎಂದು  ತಿಳಿಸಿದರು.

ಯಶೋಧಮ್ಮ 300ಶೌಚಾಲಯಗಳನ್ನು ಮಾಡಿಕೊಟ್ಟಿದ್ದೇನೆಂದು ಪತ್ರಿಕೆ ಮೂಲಕ ವರದಿ ನೀಡಿದ್ದು ಪಂಚಾಯಿತಿಯ ಸದಸ್ಯರುಗಳು ಪತ್ರಿಕೆಗಳನ್ನು ಓದಿ ನಂತರ ಸದಸ್ಯೆ ಯಶೋದಮ್ಮ ನವರನ್ನು ಕೇಳುವುದಕ್ಕೆ ಹೋದಾಗ ನಿಮ್ಮಲ್ಲಿರುವ ಸದಸ್ಯರುಗಳಿಗೆ ನಾನು ಮಾಡಿಕೊಟ್ಟಿರುವ ಶೌಚಾಲಯಗಳನ್ನು ನಿಮ್ಮಲ್ಲಿ ಮಾಡಿಕೊಡುವುದಕ್ಕೆ ಆಗಲಿಲ್ಲ ಹಾಗಾಗಿ ನಿಮಗೆ ನಾಚಿಕೆಯಾಗಬೇಕೆಂದು ಅವಮಾನ ಮಾಡಿ ಕಳಿಸಿದ್ದಾರೆ ಇದು ಸರಿಯಲ್ಲ ಇದನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರುಗಳಾದ ಮಹದೇವಪ್ರಸಾದ್ ಸುಂದ್ರಮ್ಮ, ಜಯಮ್ಮ, ಪ್ರಸಾದ್, ಮಲ್ಲೇಶ್, ರಾಮಸ್ವಾಮಿ, ಸುಂದರರಾಜು, ಎಲ್.ಸಿದ್ದರಾಜು, ರಾಜು, ಮಂಗಳಮ್ಮ, ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: