ಪ್ರಮುಖ ಸುದ್ದಿ

ಬೆಂಗಳೂರಿಗೆ ಬರುವುದಿಲ್ಲ: ಸನ್ನಿ ಲಿಯೋನ್

ಬೆಂಗಳೂರು,ಡಿ.20-ಹೊಸ ವರ್ಷಾಚರಣೆ ಅಂಗವಾಗಿ ಡಿ.31 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ `ಸನ್ನಿ ನೈಟ್’ಗೆ ಕಾರ್ಯಕ್ರಮದ ಕೇಂದ್ರ ಬಿಂದು ಬಾಲಿವುಡ್ ನಟಿ ಸನ್ನಿ ಲಿಯೋನ್ ಬರುವುದಿಲ್ಲ ಎಂದು ಸ್ವತಃ ಸನ್ನಿ ಲಿಯೋನ್ ಟ್ವಿಟ್ ಮಾಡಿದ್ದಾರೆ.

ಸನ್ನಿ ನೈಟ್ ಇನ್ ಬೆಂಗಳೂರು ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಚರ್ಚೆ, ವಿವಾದವನ್ನು ಹುಟ್ಟಿಹಾಕಿದೆ. ಈ ನಡುವೆ ತನಗೆ ಹಾಗೂ ತನ್ನ ಸಂಗಡಿಗರಿಗೆ ರಕ್ಷಣೆಯನ್ನು ಕೊಡುವ ಬಗ್ಗೆ ಪೊಲೀಸರು ಭರವಸೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನನಗೆ ಸಂಭ್ರಮಕ್ಕಿಂತ ಭದ್ರತೆ ಮುಖ್ಯ. ಇದರಿಂದಾಗಿ ತಾನು ಬೆಂಗಳೂರಿಗೆ ಬರಲ್ಲ ಎಂದು ಸನ್ನಿ ಲಿಯೋನ್ ಪ್ರತಿಕ್ರಿಯೆ ನೀಡಿದ್ದಾರೆ.

ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದ ಬಳಿಕ ಕಾರ್ಯಕ್ರಮದ ಆಯೋಜನಕರು ಅನುಮತಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಈ ನಡುವೆ ಸನ್ನಿ ಲಿಯೋನ್ ಈ ನಿರ್ಧಾರ ಕೈಗೊಂಡಿದ್ದಾರೆ. ಬೆಂಗಳೂರು ಪೊಲೀಸರು ಈಗಾಗಲೇ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು, ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ನನಗಾಗಲಿ, ನನ್ನ ತಂಡಕ್ಕಾಗಲಿ ರಕ್ಷಣೆ ಕೊಡಲು ನಮಗೆ ಕಷ್ಟ ಎಂದಿದ್ದಾರೆ. ನನ್ನ ಆಲೋಚನೆ ಪ್ರಕಾರ ಜನರ ಹಾಗೂ ನನ್ನ ರಕ್ಷಣೆ ಮುಖ್ಯ. ಈ ಹಿನ್ನೆಲೆಯಲ್ಲಿ ನಾನು ಬೆಂಗಳೂರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ದೇವರು ಒಳ್ಳೆಯದು ಮಾಡಲಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಸನ್ನಿ ಟ್ವಿಟ್ ಮಾಡಿದ್ದಾರೆ. (ವರದಿ-ಎಂ.ಎನ್)

 

Leave a Reply

comments

Related Articles

error: