ಸುದ್ದಿ ಸಂಕ್ಷಿಪ್ತ

ಕನಕದಾಸ ಜಯಂತಿ: ಪ್ರಬಂಧ ಸ್ಪರ್ಧೆ ವಿಜೇತರ ಪ್ರಕಟ

300px-kanakadasa_artವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯ ಬೆಳೆಸುವ ನಿಟ್ಟಿನಲ್ಲಿ ಮೈಸೂರಿನ ಕನಕದಾಸ ಕೇಂದ್ರದ ವತಿಯಿಂದ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಕನಕ ಸಾಹಿತ್ಯ ಲೋಕ’ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು  ಎಚ್.ಡಿ.ಕೊಟೆ ತಾಲೂಕಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ ಬಿ.ಪ್ರಂಜಲ ಪ್ರಥಮ ಸ‍್ಥಾನ ಪಡೆದಿದ್ದಾಳೆ.

ವಿಜೇತರು : ಮೈಸೂರು ಗ್ರಾಮಾಂತರ ವಲಯದ ಬೀರಿಹುಂಡಿಯ ಸರ್ಕಾರಿ ಪ್ರೌಢಶಾಲೆಯ ಎಂ.ಚೈತ್ರ ದ್ವಿತೀಯ, ಎಚ್.ಡಿ.ಕೋಟೆ (ತಾ) ಕೆ.ಬೆಳ್ತೂರು ಸರ್ಕಾರಿ ಪ್ರೌಢಶಾಲೆಯ ನರಸಿಂಹ ತೃತೀಯ, ಮೈಸೂರಿನ ಅಶೋಕಪುರಂ ಸರ್ಕಾರಿ ಪ್ರೌಢಶಾಲೆಯ ಎಂ.ಆರ್.ಭಾವನ ಮತ್ತು ನಂಜನಗೂಡು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕೆ.ಮಾನ್ವೆಲ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

ನಾಳೆ (ನ.17) ಕಲಾಮಂದಿರದಲ್ಲಿ ಮೈಸೂರು ಜಿಲ್ಲಾಡಳಿತವು ಆಯೋಜಿಸಿರುವ ಕನಕ ಜಯಂತಿ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಬಹುಮಾನ ವಿತರಿಸುವರು.

 

 

Leave a Reply

comments

Related Articles

error: