ಕರ್ನಾಟಕ

ಜ.18-19: ಹತ್ತನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

ಬೆಂಗಳೂರು (ಡಿ.20): ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಬೆಂಗಳೂರಿನ ಯಲಹಂಕದಲ್ಲಿರುವ ರೇವಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಕಾಡೆಮಿಯ ದಶಮಾನೋತ್ಸವ ಸಮೇಳನವನ್ನು “ಮಾನವ ಕುಲದ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ” (Science and Technology for Future of Humanity) ಎಂಬ ಕೇಂದ್ರ ವಿಷಯದ ಮೇಲೆ 2018 ರ ಜನವರಿ 18 ಮತ್ತು 19 ರಂದು ಆಯೋಜಿಸುತ್ತಿದೆ.

ಈ ಸಮ್ಮೇಳನದಲ್ಲಿ ಯುವ ಸಂಶೋಧಕರು ಮೂಲ ಮತ್ತು ಅನ್ವಯಿಕ ವಿಜ್ಞಾನಗಳು ಹಾಗೂ ಇಂಜಿನಿಯರಿಂಗ್ ವಿಷಯಗಳಿಗೆ ಸಂಬಂಧಿಸಿದ ವೈಜ್ಞಾನಿಕ ಪ್ರಾತ್ಯಕ್ಷಿಕೆಗಳು, ಮಾದರಿಗಳನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಕಲ್ಪಿಸಲಾಗಿದೆ. ಈ ಸಮ್ಮೇಳನದ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳಲು ಮತ್ತು ಸಂಶೋಧನಾ ಸಾರಾಂಶವನ್ನು ಸಲ್ಲಿಸಲು ಜನವರಿ 5, 2018ರ ಶುಕ್ರವಾರ ಕೊನೆಯ ದಿನವಾಗಿದ್ದು, ಇ-ಮೇಲ್ ಮೂಲಕ [email protected] ಗೆ ಕಳುಹಿಸಬಹುದಾಗಿದೆ. ಅರ್ಜಿ ನಮೂನೆ ಮತ್ತು ಇತರೆ ವಿವರಗಳನ್ನು ಅಕಾಡೆಮಿ ವೆಬ್ ತಾಣದಿಂದ www.kstaconference.com ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಯನ್ನು ಡಾ.ಎಂ.ಎಂ.ರಮೇಶ್, ಹಿರಿಯ ವೈಜ್ಞಾನಿಕ ಅಧಿಕಾರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (ದೂರವಾಣಿ : 080-26711160 ಮತ್ತು ಮೊಬೈಲ್ : 9845258894 ಇವರಿಂದ ಪಡೆಯಬಹುದಾಗಿದೆ.

(ಎನ್‍ಬಿಎನ್‍)

Leave a Reply

comments

Related Articles

error: