ಮೈಸೂರು

ಯುವಕರನ್ನು ದೇಶದ ಆಸ್ತಿಯನ್ನಾಗಿ ರೂಪಿಸಬೇಕು : ಬಿ.ಎಲ್.ಭೈರಪ್ಪ

ಯುವಕರ ಶಕ್ತಿ ಮತ್ತು ಯುವಸಬಲೀಕರಣದಿಂದ ಮಾತ್ರ ದೇಶದ ಆರ್ಥಿಕತೆ, ಸಮಾಜದ ಸುವ್ಯವಸ್ಥೆಗೆ ದಾರಿ ದೊರಕಲಿದೆ ಎಂದು ಮೇಯರ್ ಬಿ.ಎಲ್.ಭೈರಪ್ಪ ತಿಳಿಸಿದರು.

ಮೈಸೂರಿನ ನೆಹರು ಯುವ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ವತಿಯಿಂದ ಐದು ದಿನಗಳ ಕಾಲ ಆಯೋಜಸಿರುವ ಯುವ ಮುಂದಾಳತ್ವ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರವನ್ನು ಬಿ.ಎಲ್.ಭೈರಪ್ಪ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು ದೇಶದ ಶಕ್ತಿಯೆಂದರೆ ಯುವಶಕ್ತಿ. ದೇಶದ ಉತ್ತಮ ಭವಿಷ್ಯಕ್ಕಾಗಿ ಯುವಕರನ್ನು ಹೆಚ್ಚಾಗಿ ಪ್ರೋತ್ಸಾಹಿಸಬೇಕು. ಅವರಿಗೆ ಹೆಚ್ಚೆಚ್ಚು ಶಿಕ್ಷಣ ನೀಡುವ ಮೂಲಕ ದೇಶದ ಆಸ್ತಿಯನ್ನಾಗಿ ರೂಪಿಸಬೇಕು. ವಿವೇಚನಾಶಕ್ತಿ, ಆಲೋಚನಾಶಕ್ತಿ,  ಬೆಳೆಸಬೇಕು.  ಇಂದು ಸಮಾಜದಲ್ಲಿ ಆಸಕ್ತಿವಹಿಸಿ ಕಲಿಯುವಂತಹವರಲ್ಲಿ ಮಹಿಳೆಯರು ಮೊದಲಿಗರಾಗಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದರು. ಯುವ ಸಬಲೀಕರಣಕ್ಕೆ ಗ್ರಾಮಾಂತರದವರೇ ಮುಂದಾಗಿದ್ದಾರೆ.  ಉತ್ತಮ ಆಡಳಿತ ಮೂಲ ಸೌಕರ್ಯಗಳಿಗೆ ಶಿಕ್ಷಣ, ರಾಜಕೀಯ ವ್ಯವಸ್ಥೆ ಮುಂದಾಗಿದೆ ಎಂದು ತಿಳಿಸಿದರು.

ಶಾಸಕ ವಾಸು ಮಾತನಾಡಿ, ಯುವಕರು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚುತ್ತದೆ ಹಾಗೂ ನೈತಿಕ ಮಟ್ಟ ಬೆಳೆಯುತ್ತದೆ. ಸಮಾಜದಲ್ಲಿ ಸಮಾನತೆಯು ದಾರಿ ದೀಪವಾಗಬೇಕು. ಇಂದಿನ ಯುವಕರು ದಾರಿ ತಪ್ಪುತ್ತಿದ್ದಾರೆ. ಇಂದು ತಂತ್ರಜ್ಞಾನದ ಬಳಕೆ ಹೆಚ್ಚಾಗಿದೆ. ಯುವಕರು ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ವೇಗವಾಗಿರಬೇಕು ಆದರೆ ಸಮಾಜದ ವ್ಯವಸ್ಥೆಯನ್ನು ಅರಿತು ಕೊಳ್ಳಬೇಕು, ಯುವಪೀಳಿಗೆಯವರು ಶಿಕ್ಷಣ, ಶಿಸ್ತು ಬದ್ದತೆಗೆ ಕಾರಣವಾಗಬೇಕು. ಸಮಾಜದ ಆರ್ಥಿಕತೆಗೆ ಸಮಾಜದ ತಿರುವಿಗೆ ಯುವಕರು ಮುಂದಾಗಬೇಕು. ಯುವಕರಿಗೆ ರಾಜಕೀಯವಾಗಿ ಶಕ್ತಿ ತುಂಬುವ ಪರಂಪರೆ ಬೆಳೆದುಬಂದಿದೆ. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಶಕ್ತಿ ಯುವಕರಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ತಲಕಾವೇರಿ ಮಹಿಳಾ ಮಂಡಳಿ ಅಧ್ಯಕ್ಷೆ ನಳಿನಿ ತಮಯ್ಯ, ಮೈಸೂರು ನೆಹರು ಯುವ ಕೇಂದ್ರದ ಆಡಳಿತಾಧಿಕಾರಿ ನಟರಾಜು ಹಾಗೂ ಶಿಬಿರದ ವಿದ್ಯಾರ್ಥಿಗಳು ಭಾಗವಹಿಸಿದ್ದರು

Leave a Reply

comments

Related Articles

error: