ಕ್ರೀಡೆಮೈಸೂರು

ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ: ಉತ್ತರ ಪ್ರದೇಶಕ್ಕೆ ಕಠಿಣ ಗುರಿ ನೀಡಿದ ಮುಂಬೈ

ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ  ಮುಂಬೈ ತಂಡ ಉತ್ತರ ಪ್ರದೇಶಕ್ಕೆ ಕಠಿಣ ಗುರಿಯನ್ನು ನೀಡಿದೆ.

ಮೈಸೂರಿನ ಗಂಗೋತ್ರಿಯ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡದವರು ಆರಂಭಿಕ ಆಘಾತ ಅನುಭವಿಸಿದ್ದಾರೆ. ಅವರಿಗೆ 295ರನ್ ಗಳ ಸವಾಲಿದೆ. 14ಓವರ್ ಗಳಲ್ಲಿ 1ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದ್ದು ತಂಡಕ್ಕೆ ಶಿವಂ ಚೌಧರಿ ಹಾಗೂ ಸಮರ್ಥ್ ಸಿಂಗ್ ಆಸರೆಯಾಗಿದ್ದಾರೆ. ಇನ್ನೂ ಗೆಲುವಿಗೆ 252ರನ್ ಬೇಕಿದ್ದು ಬುಧವಾರ ಕೊನೆಯ ದಿನವಾಗಿದೆ.

ದ್ವಿತೀಯ ಇನ್ನಿಂಗ್ಸ್ ನಲ್ಲಿ ಮುಂಬೈ ತಂಡ 98.4ಓವರ್ ಗಳಲ್ಲಿ 286ರನ್ ಕಲೆಹಾಕಿತ್ತು. ಪ್ರಥಮ ಇನ್ನಿಂಗ್ಸ್ ನಲ್ಲಿ 1ರನ್ ನಿಂದ ಶತಕ ವಂಚಿತರಾದ ಸೂರ್ಯಕುಮಾರ್ ಯಾದವ್ 10ರನ್ ಗಳಿಂದ ಈ ಬಾರಿಯೂ ಶತಕ ವಂಚಿತರಾದರು. 186 ಎಸೆತಕ್ಕೆ 10 ಬೌಂಡರಿ, 1 ಸಿಕ್ಸರ್ ಬಾರಿಸಿದರು.

ಸಿದ್ದೇಶ್ ಲಾಡ್, ಶಾರ್ದೂಲ್ ಠಾಕೂರ್, ಅಭಿಷೇಕ್ ನಾಯರ್ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಇಂದು ಪಂದ್ಯಕ್ಕೆ ತೆರೆ ಬೀಳಲಿದೆ.

Leave a Reply

comments

Related Articles

error: