ಸುದ್ದಿ ಸಂಕ್ಷಿಪ್ತ

ಡಿ.22ರಂದು ಅಂಬೇಡ್ಕರ್ ರಥಯಾತ್ರೆಗೆ ಚಾಲನೆ

ಮೈಸೂರು, ಡಿ. 20 : ಡಾ.ಅಂಬೇಡ್ಕರ್ ಸಮಾಜ್ ವಾದಿ ಡೆಮಾಕ್ರಿಟಿಕ್ ಪಾರ್ಟಿಯಿಂದ ಡಿ.22ರಂದು ಮಧ್ಯಾಹ್ನ 12.15ರಿಂದ ಕುವೆಂಪುನಗರದ ರಮಾಬಾಯಿ ಅಂಬೇಡ್ಕರ್ ವಿದ್ಯಾಸಂಸ್ಥೆಯಿಂದ ‘ಅಂಬೇಡ್ಕರ್ ರಥಯಾತ್ರೆ’ಗೆ ಚಾಲನೆ ನೀಡಲಾಗುವುದು.

ಜನಸಾಮಾನ್ಯರಲ್ಲಿ ಹಕ್ಕು ಬಾಧ್ಯತೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆಗೂ ಚಾಲನೆ ನೀಡಲಾಗುವುದು ಎಂದು ಅಧ್ಯಕ್ಷ ಸಿ.ಎಂ.ನಾಗರಾಜ್ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: