ದೇಶ

ನೋಟು ನಿಷೇಧ ತಡೆ ಅರ್ಜಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರದ ಹಳೆ ನೋಟು ನಿಷೇಧ ತಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.

ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರದ ವಿರುದ್ಧ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್  ಸೇರಿದಂತೆ ನಾಲ್ಕು ಜನ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ನೋಟು ಹಿಂಪಡೆಯವ ಆದೇಶಕ್ಕೆ ತಡೆ ನೀಡಲು ಕೋರಿದ್ದರು.  ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠ ಅರ್ಜಿಯನ್ನು  ತಳ್ಳಿ ಹಾಕಿದ್ದು  ನೋಟು ನಿಷೇಧದಿಂದ ಸಾರ್ವಜನಿಕರಿಗಾಗುವ ಅನಾನುಕೂಲದ ಪರಿಹರಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರವನ್ನು ಸ್ಪಷ್ಟನೇ ಕೇಳಿದ್ದು ಮುಂದಿನ ವಿಚಾರಣೆಯನ್ನು ನ.25ಕ್ಕೆ ಮುಂದೂಡಿದೆ.

ಏಕಾಏಕಿ ನೋಟಿನ ರದ್ದತಿಯಿಂದ ಸಾರ್ವಜನಿಕ ಜನಜೀವನ ಅಸ್ತವ್ಯಸ್ತವಾಗಿದ್ದು ದೈನಂದಿನ ಜೀವನಕ್ಕೆ ವ್ಯತ್ಯಯ ಉಂಟಾಗಿದೆ ಎನ್ನುವುದು ಅರ್ಜಿದಾರರ ದೂರಾಗಿತ್ತು . ಕಪ್ಪು ಹಣ ತಡೆ ಹಾಗೂ ತೆರಿಗೆ ವಂಚಿತರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಕಳೆದ ನ.8ರಿಂದ ಭಾರತದ ದೊಡ್ಡ ಮೊತ್ತದ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

Leave a Reply

comments

Related Articles

error: