ಮೈಸೂರು

ಲೈಕ್ ಟ್ರೆಂಡ್  ಫ್ಯಾಮಿಲಿ ಸೆಲೂನ್ ನಲ್ಲಿ ವೇಶ್ಯಾವಾಟಿಕೆ : ಇಬ್ಬರ ಬಂಧನ

ಮೈಸೂರು,ಡಿ.20:- ಮೈಸೂರು ಬೋಗಾದಿ ರಸ್ತೆಯಲ್ಲಿರುವ ರಿಂಗ್ ರಸ್ತೆಯಲ್ಲಿನ ಸೆಲೂನ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಸೆಲೂನ್ ಮಾಲಿಕನನ್ನು ಪತ್ನಿ ಸಮೇತ ಬಂಧಿಸಿದ್ದಾರೆ.

ರಿಂಗ್ ರಸ್ತೆಯಲ್ಲಿರುವ ಲೈಕ್ ಟ್ರೆಂಡ್  ಫ್ಯಾಮಿಲಿ ಸೆಲೂನ್ ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ  ನಡೆಸಿದ ಪೊಲೀಸರು ಸೆಲೂನ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಗಂಡ ಹೆಂಡತಿ ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತರು ಮೈಸೂರಿನ ಪ್ರಖ್ಯಾತ ನಟರಿಬ್ಬರ ಹೆಸರನ್ನು ಹೇಳಿದ್ದಾರೆ ಎನ್ನಲಾಗಿದೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: