ಮೈಸೂರು

ವಿಶೇಷ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸಮಾಜಸೇವಕ

ಮೈಸೂರಿನ ನಿರೀಕ್ಷೆ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಸಮಾಜಸೇವಕ ಅಬ್ದುಲ್ ಅಜೀಜ್  ತಮ್ಮ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡರು.

ಮೈಸೂರಿನ ಎ.ಎನ್.ಐ ಕಾವೇರಿ ಎಂಪೋರಿಯಮ್ ಮಾಲಿಕ, ಹಾಗೂ ಸಮಾಜ ಸೇವಕ ತಮ್ಮ ಹುಟ್ಟುಹಬ್ಬದಂದು ವಿಕಲಚೇತನ ಮಕ್ಕಳಿಗೆ ಊಟವನ್ನು ಆಯೋಜಿಸಿದ್ದರು. ಮಕ್ಕಳಿಗೆ ಕೇಕ್ ಮತ್ತು ಸಿಹಿಯನ್ನು ಹಂಚಿ ಮಕ್ಕಳೊಂದಿಗೆ ತಮ್ಮ ಅಮೂಲ್ಯ ಸಮಯವನ್ನು ಕಳೆದರು.

ಮಕ್ಕಳಿಗೆ ಕ್ರೀಡಾಸ್ಪರ್ಧೆಯನ್ನು ಆಯೋಜಿಸಲಾಗಿತ್ತಲ್ಲದೇ, ಜಂಗಲ್ ಬುಕ್ ಸಿನಿಮಾ ವೀಕ್ಷಣೆಯನ್ನೂ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಉದ್ಯಮಿಗಳಾದ ನೂರಿ,ಸೂರ್ಯ, ಶಾಲೆಯ ಅಧ್ಯಕ್ಷ ಪ್ರವೀಣ್ ಕೃಪಾಕರ್, ಎ.ಎನ್.ಐ ಕಾವೇರಿ ಎಂಪೋರಿಯಂ ವ್ಯವಸ್ಥಾಪಕ ಅನಿಲ್ ಕುಮಾರ್, ಪ್ರಾಂಶುಪಾಲೆ ಹೇಮಮಾಲಿನಿ ಕೃಪಾಕರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: