ಮೈಸೂರು

ಡಿ.24: ನಟನರಂಗಶಾಲೆಯ ಹೊಸ ನಾಟಕ ‘ಸೀಗಲ್’ ಪ್ರಯೋಗ

ಮೈಸೂರು,ಡಿ.21:- ನಟನ ರಂಗಶಾಲೆಯ 2017-18ನೇ ಸಾಲಿನ ರಂಗಾಭ್ಯಾಸಿಗಳ ಕಲಿಕಾ ಪ್ರಯೋಗವಾಗಿ  ಹೇಮಾ ಪಟ್ಟಣಶೆಟ್ಟಿಯವರು ಅನುವಾದಿಸಿರುವ ಆ್ಯಂಟನ್‍ಚೆಕಾವ್ ನ ‘ಸೀಗಲ್’ ನಾಟಕವನ್ನು ಎನ್.ಎಸ್.ಡಿ. ಪದವೀಧರೆ, ಯುವ ನಿರ್ದೇಶಕಿ  ಶ್ವೇತಾರಾಣಿ ನಿರ್ದೇಶಿಸಿದ್ದು, ಡಿ.24ರಂದು ಸಂಜೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಈ ನಾಟಕದ ಮೊದಲನೇ ಪ್ರಯೋಗ ನಡೆಯಲಿದೆ.

‘ಸೀಗಲ್’ ನಾಟಕದಲ್ಲಿ ರಷ್ಯಾದ ಕ್ರಾಂತಿಗೂ ಮುಂಚಿನ ಮಧ್ಯಮ ವರ್ಗದ ಉತ್ಸಾಹ ರಹಿತ ಬದುಕನ್ನು ಚಿತ್ರಿಸುತ್ತಾನೆ ಚೆಕಾವ್. ಅವನ ನಾಟಕದಲ್ಲಿ ಬರುವ ಸಮುದಾಯವಾಗಲಿ ಅಥವಾ ಅನುಭವವಾಗಲಿ ಅದು ನಮ್ಮದಲ್ಲ ಎಂದು ಅನಿಸುವುದೇಇಲ್ಲ. ಹಾಗಾಗಿಯೇ ಬದುಕಿನ ಅಸಂಗತತೆ, ಕ್ರೌರ್ಯ, ಹಾಸ್ಯ, ಪ್ರೀತಿ, ವಿಡಂಬನೆಗಳಿಗೆ ಭಾವೋದ್ರಿಕ್ತರಾಗಿ ಸ್ಪಂದಿಸುತ್ತಿರುವ ಅವನ ಪಾತ್ರಗಳು, ದೇಶ-ಕಾಲವನ್ನು ಮೀರಿ ನಮ್ಮದೇ ವ್ಯಕ್ತಿತ್ವದ ಮೂರ್ತರೂಪಗಳಾಗಿ ಕಾಣತೊಡಗುತ್ತವೆ. ಹೊಸ ಪ್ರಯೋಗ ಪ್ರೇಕ್ಷಕರನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ನಟನರಂಗಶಾಲೆಯ ಪ್ರಮುಖರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: